7:50 PM Tuesday 16 - December 2025

ರಾಷ್ಟ್ರಗೀತೆ ಹಾಡುತ್ತಿರುವಾಗ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು

pelissa
09/08/2023

ಚಾಮರಾಜನಗರ: ರಾಷ್ಟ್ರಗೀತೆ ಹಾಡುವಾಗ ವಿದ್ಯಾರ್ಥಿನಿಗೆ ಹೃದಯಾಘಾತವಾಗಿ ಅಸುನೀಗಿದ ಧಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ನಿರ್ಮಲಾ ಕಾನ್ವೆಂಟಿನಲ್ಲಿ ನಡೆದಿದೆ.

ಪಟ್ಟಣದ ನಿರ್ಮಲಾ ಕಾನ್ವೆಂಟಿನ ಎಸ್ ಎಸ್ ಎಲ್ಸಿ ವಿದ್ಯಾರ್ಥಿನಿ ಪೆಲಿಸಾ ಮೃತ ದುರ್ದೈವಿ. ಇಂದು ರಾಷ್ಟ್ರಗೀತೆ ಹಾಡುತ್ತಿದ್ದಾಗ ದಿಢೀರನೇ ಕುಸಿದು ಬಿದ್ದಿದ್ದಾಳೆ. ಬಳಿಕ, ಆಸ್ಪತ್ರೆಗೆ ರವಾನಿಸಿತರಾದರೂ ಅಷ್ಟರಲ್ಲಾಗಲೇ ಅಸುನೀಗಿದ್ದಾಳೆ ಎಂದು ತಿಳಿದುಬಂದಿದೆ.

ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಮೃತಳ ತಾಯಿ ದೂರು ಕೊಟ್ಟಿದ್ದು ಇನ್ನಷ್ಟೇ ಈ ಸಂಬಂಧ ಪ್ರಕರಣ ದಾಖಲಾಗಬೇಕಿದೆ.

ಪೆಲಿಸಾ ಮೂಲತಃ ಬೆಂಗಳೂರಿನವಳಾಗಿದ್ದು ಬಾಲಕಿ ತಂದೆ ಅಸುನೀಗಿದ್ದರಿಂದ ಕ್ರೈಸ್ತ ಮಿಷನರಿ ಸಹಾಯದಿಂದ ವಿದ್ಯಾಭ್ಯಾಸಕ್ಕಾಗಿ ಗುಂಡ್ಲುಪೇಟೆ ನಿರ್ಮಲಾ ಕಾನ್ವೆಂಟಿಗೆ ದಾಖಲಿಸಿ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಾಲಕಿಗೆ ತಾಯಿಣ ಓರ್ವ ಸಹೋದರ, ಓರ್ವ ಸಹೋದರಿ ಇದ್ದು ಬೆಂಗಳೂರಿನಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version