ಅರವಿಂದ್ ಕೇಜ್ರಿವಾಲ್ ಮನೆಗೆ ನುಗ್ಗಿದ ಸ್ವಾತಿ ಮಲಿವಾಲ್ ನನ್ನನ್ನು ನಿಂದಿಸಿದ್ದಾರೆ: ಬಿಭವ್ ಕುಮಾರ್ ಆರೋಪ

ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದೆ ಸ್ವಾತಿ ಮಲಿವಾಲ್ ಅವರು ಅನಗತ್ಯ ಒತ್ತಡವನ್ನು ಸೃಷ್ಟಿಸುವ ಪ್ರಯತ್ನದಲ್ಲಿ ತಮ್ಮನ್ನು ತಪ್ಪಾಗಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರೋ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಮೇ 13 ರಂದು ದೆಹಲಿ ಮುಖ್ಯಮಂತ್ರಿ ನಿವಾಸಕ್ಕೆ ಬಲವಂತವಾಗಿ ಮತ್ತು ಅನಧಿಕೃತವಾಗಿ ಪ್ರವೇಶಿಸಿದಾಗ ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರು “ಗದ್ದಲ ಮತ್ತು ಹಲ್ಲೆ” ಸೃಷ್ಟಿಸಲು ಪ್ರಯತ್ನಿಸಿದರು ಎಂದು ಅವರು ಆರೋಪಿಸಿದ್ದಾರೆ.
ಶುಕ್ರವಾರ ಇವರು ಸಲ್ಲಿಸಿದ ದೂರಿನಲ್ಲಿ ಮಲಿವಾಲ್ ಅವರು ಬಲವಂತವಾಗಿ ಮತ್ತು ಕಾನೂನುಬಾಹಿರವಾಗಿ ಆವರಣಕ್ಕೆ ಅತಿಕ್ರಮಣ ಮಾಡಿ ಕೇಜ್ರಿವಾಲ್ ಅವರ ನಿವಾಸಕ್ಕೆ ಅನಧಿಕೃತ ಪ್ರವೇಶ ಪಡೆದ ನಂತರ ಅವರು ನನ್ನನ್ನು ಅವಾಚ್ಯವಾಗಿ ನಿಂದಿಸಿದ್ದಾರ್ವ್ “ತುಮ್ಹಾರಿ ಹಿಮ್ಮತ್ ಕೈಸೆ ಹೈ ಏಕ್ ಎಂಪಿ ಕೋ ರೋಕ್ನೆ ಕಿ” ಎಂದು ಹೇಳಿದರು. ತುಮ್ಹಾರಿ ಔಕತ್ ಕ್ಯಾ ಹೈ. ಸಂಸದರನ್ನು ತಡೆಯಲು ನಿಮಗೆಷ್ಟು ಧೈರ್ಯ? ನಿಮ್ಮ ಸ್ಥಿತಿ ಏನು?” ಎಂದು ಪ್ರಶ್ನಿಸಿದ್ದರು ಎಂದು ಆರೋಪಿಸಿದ್ದಾರೆ.
ಕುಮಾರ್ ಅವರು ತಮ್ಮ ದೂರಿನ ಪ್ರತಿಯನ್ನು ಉಪ ಪೊಲೀಸ್ ಆಯುಕ್ತರಿಗೆ (ಉತ್ತರ) ಕಳುಹಿಸಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ, ಬಿಭವ್ ಕುಮಾರ್ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಒಪ್ಪಿಕೊಂಡ ಎರಡು ದಿನಗಳ ನಂತರ ಎಎಪಿ “ಯು-ಟರ್ನ್” ತೆಗೆದುಕೊಂಡಿದೆ ಎಂದು ಮಲಿವಾಲ್ ಟ್ವೀಟ್ ಮಾಡಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth