ಗುವಾಹಟಿ: ಸಿಡಿಲು ಬಡಿದು 20 ಆನೆಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಸ್ಸಾಮ್ ನ ನಾಗಾನ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಮರಿ ಆನೆಗಳು ಕೂಡ ಇದ್ದ ಆನೆಯ ಹಿಂಡಿಗೆ ಸಿಡಿಲು ಬಡಿದೆ ಎಂದು ಅರಣ್ಯಾಧಿಕಾರಿ ಅಮಿತ್ ಸೈಯ್ಯಾ ತಿಳಿಸಿದ್ದಾರೆ. ಇಲ್ಲಿನ ಕತಿಯೋಟೋಲಿಯ ಮೀಸಲು ಅರಣ್ಯದೊಳಗೆ ಈ ಘಟನೆ ನಡೆದಿದೆ. ಈ ಪ್ರದೇಶವು ಕಾಡ...