ಕೊಲ್ಲಂ: ಮಹಿಳೆಯೊಬ್ಬರು ತಾನು ಗುಡಿಸುತ್ತಿದ್ದ ಗ್ರಾಮ ಪಂಚಾಯತ್ ನ ಅಧ್ಯಕ್ಷೆಯಾದ ಘಟನೆ ಕೇರಳದಲ್ಲಿ ನಡೆದಿದ್ದು, ಕೇರಳದ ಪಥನಪುರಂ ಬ್ಲಾಕ್ ಪಂಚಾಯಿತಿಯಲ್ಲಿ ಅರೆಕಾಲಿಕ ಸ್ವೀಪರ್ ಆಗಿದ್ದ ಆನಂದವಳ್ಳಿ ಎಂಬ ಮಹಿಳೆ ಇದೀಗ ಅದೇ ಗ್ರಾಮ ಪಂಚಾಯತ್ ನ ಅಧ್ಯಕ್ಷೆಯಾಗಿದ್ದಾರೆ. ಪರಿಶಿಷ್ಟ ಜಾತಿಯ ಆನಂದವಳ್ಳಿ ಅವರು ಇತ್ತೀಚೆಗೆ ನಡೆದ ಸ್ಥಳೀಯ ಸಂಸ್...