ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯನ್ನು ಸಹಿಸದ ಅಭಿಮಾನಿಯೋರ್ವ ತನ್ನ ಕೈಗೆ ಬರೆ ಹಾಕಿಕೊಂಡು ಅಪ್ಪುವಿನ ಹೆಸರು ಬರೆದ ಘಟನೆ ನಡೆದಿದ್ದು, ಅಪ್ಪು ಅವರ ನಿಧನ ಸಹಿಸಲಾಗದೇ ಅಭಿಮಾನಿಗಳು ನಡೆಸುತ್ತಿರುವ ಅತಿರೇಕದ ವರ್ತನೆ ಇದೀಗ ಆತಂಕಕ್ಕೆ ಕಾರಣವಾಗಿದೆ. ಪುನೀತ್ ರಾಜ್ ಕುಮಾರ್ ಅವರ ಫೋಟೋಗೆ ಪೂಜೆ ಸಲ್ಲಿಸಿದ ದಾವಣ...