ಚೆನ್ನೈ: ದರೋಡೆಗೆಂದು ಎಡಿಎಂ ಕೇಂದ್ರದೊಳಗೆ ನುಗ್ಗಿದ್ದ ಕಳ್ಳ ಎಟಿಎಂ ಒಡೆಯುತ್ತಿದ್ದ ವೇಳೆ ಎಟಿಎಂ ಮಷೀನ್ ಹಾಗೂ ಗೋಡೆಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದು, ಇದೀಗ ಆರೋಪಿಯು ಪೊಲೀಸರ ಅತಿಥಿಯಾಗಿದ್ದಾನೆ. ಎಟಿಎಂ ಕಳ್ಳನಿಗೆ ತನ್ನ ಕುಡಿತದ ಚಟವೇ ಮಾರಕವಾಗಿ ಪರಿಣಮಿಸಿದ್ದು, ಇದರಿಂದಾಗಿ ಸುಲಭವಾಗಿ ಪೊಲೀಸರ ಬಲೆಗೆ ಕಳ್ಳ ಬಿದ್ದಿದ್ದಾನೆ. 28 ವ...