ಚಿಕ್ಕಮಗಳೂರು: ಸಹೋದರಿಗೆ ಬಾಗಿನ ನೀಡಿ, ತನ್ನ ಪುತ್ರಿಯೊಂದಿಗೆ ಮನೆಗೆ ವಾಪಸ್ ಆಗುತ್ತಿದ್ದ ಸಹೋದರ ಹಾಗೂ ಆತನ ಪುತ್ರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರಿನ ಉದ್ದೇಬೋರನಹಳ್ಳಿ ಬಳಿಯಲ್ಲಿ ನಡೆದಿದೆ. 58 ವರ್ಷ ವಯಸ್ಸಿನ ಜಯಣ್ಣ ಹಾಗೂ ಅವರ ಪುತ್ರಿ 19 ವರ್ಷ ವಯಸ್ಸಿನ ರಕ್ಷಿತಾ ಮೃತಪಟ್ಟವರು ಎಂದು ತಿಳ...