ಬೆಂಗಳೂರು: ಬಿಕಾಂ ಪದವೀಧರರಾದ 23 ವರ್ಷದ ಇಬ್ಬರು ಯುವಕರು ಶಿಕ್ಷಣ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ದೇಶಾದ್ಯಂತ 245 ದಿನಗಳ ಕಾಲ ಕೈಗೊಂಡಿದ್ದ ಸೈಕಲ್ ಜಾಥಾ ಯಶಸ್ವಿಯಾಗಿದ್ದು, ಶನಿವಾರ ಕೋಲಾರ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿದ ತಮ್ಮದೇ ಕ್ಷೇತ್ರದ ಈ ಯುವಕರನ್ನು ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಬರಮಾಡಿಕೊಂಡರು. ...