ಅಪ್ಪಗೆರೆ ಡಿ.ಟಿ.ಲಂಕೇಶ್ ಸೈದ್ಧಾಂತಿಕ ವಿಚಾರಗಳೇ ಹಾಗೆ, ಬಹುತೇಕ ಸಂದರ್ಭಗಳಲ್ಲಿ ವ್ಯಕ್ತಿಗಳ ನಡುವಿನ ವೈಯುಕ್ತಿಕ ಸಂಬಂಧಗಳನ್ನು ನಿರ್ಧರಿಸುತ್ತವೆ. ನಮ್ಮವರನ್ನು ಸದಾ ಒಂದು ಅನುಮಾನದ ಕಣ್ಣಿಟ್ಟು ನೋಡುವಂತೆ ಮಾಡುತ್ತವೆ. ಇತರರ ನಡುವೆ ಚರ್ಚೆಗೆ ಕುಂತಾಗ ಹಗುರವಾದ ಮಾತುಗಳನ್ನಾಡಿಸುತ್ತವೆ. ಎದುರಿಗೆ ಸಿಕ್ಕಾಗ ತೋರಿಕೆ ನಗುನಗುತ್ತ...