ನವದೆಹಲಿ: ಲಂಚ ಪ್ರಕರಣದಲ್ಲಿ ಗೇಲ್ನ ಮಾರ್ಕೆಟಿಂಗ್ ನಿರ್ದೇಶಕ ಇ.ಎಸ್.ರಂಗನಾಥನ್ ಅವರನ್ನು ಕೇಂದ್ರೀಯ ತನಿಖಾ ದಳ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಂಗನಾಥನ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ 1.3 ಕೋಟಿ ರೂ.ನ್ನು ವಶಪಡಿಸಿಕೊಂಡಿತ್ತು. ದೆಹಲಿಯಲ್ಲಿರುವ ರಂಗನಾಥನ್ ನಿವಾಸ ಕಚೇರಿ ಮತ್ತು ನೋಯ್ಡಾದಲ್ಲಿರುವ ನಿವಾಸವನ್ನು ಸ...