ಬೆಳಗಾವಿ: ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ವಿಜಯೋತ್ಸವವನ್ನು ತನ್ನ ಮನೆಯಂಗಳಲ್ಲಿ ಆಚರಿಸುವುದು ಬಿಟ್ಟು, ಸೋತ ಅಭ್ಯರ್ಥಿಯ ಮನೆಯ ಮುಂದೆ ಆಚರಿಸಿದ್ದಾನೆ. ಇದರಿಂದ ಆಕ್ರೋಶಿತ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳೊಂದಿಗೆ ಮಾರಾಮಾರಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ...