ಉಳ್ಳಾಲ: ನಾಪತ್ತೆಯಾಗಿದ್ದ ಬಾಲಕನೋರ್ವನ ಮೃತದೇಹ ಭಾನುವಾರ ಮುಂಜಾನೆ ಕೊಲೆ ಮಾಡಲಾಗಿರುವ ಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ.ರೋಡ್ ಎಂಬಲ್ಲಿ ಪತ್ತೆಯಾಗಿದೆ. 13 ವರ್ಷ ವಯಸ್ಸಿನ ಹಕೀಬ್ ಹತ್ಯೆಗೀಡಾಗಿರುವ ಬಾಲಕನಾಗಿದ್ದು, ತನ್ನ ಮನೆಯಿಂದ 3 ಕಿ.ಮೀ. ದೂರದಲ್ಲಿಯೇ ಬಾಲಕನ ಮೃತದೇಹ ಪತ್ತೆಯಾಗಿದ...