ನಮ್ಮ ಆರೋಗ್ಯ ಯಾವುದೋ ಪ್ರೈವೇಟ್ ಆಸ್ಪತ್ರೆಗಳಲ್ಲಿದೆ ಎನ್ನುವ ಮೂಢನಂಬಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಬಂದ ಬಳಿಕವಂತೂ, ರೋಗಗಳ ವಿರುದ್ಧ ಸ್ಟಿರಾಯ್ಡ್ ಗಳನ್ನು ಬಳಸುತ್ತಿರುವ ಸಂಖ್ಯೆ ಕೂಡ ಹೆಚ್ಚಾಗಿದೆ ಎನ್ನುವ ಆತಂಕಗಳ ನಡುವೆಯೇ, ಜನರಲ್ಲಿ ಆರೋಗ್ಯದ ಬಗೆಗೆ ಕಾಳಜಿ ಹೆಚ್ಚಾಗಿರುವುದೇನು ಸುಳ್ಳಲ...