ಮಂಗಳೂರು: ಸಮುದ್ರದ ದಡದಲ್ಲಿ ಅಪರಿಚಿತ ಯುವತಿಯೋರ್ವರ ಮೃತದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದ್ದು, ಧಕ್ಕೆಗೆ ತೆರಳುತ್ತಿದ್ದ ಮೀನುಗಾರರು ಯುವತಿಯ ಮೃತದೇಹ ಕಂಡು ಮಂಗಳೂರಿನ ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ನಗರದ ಹೊಯ್ಗೆ ಬಜಾರ್ ಸಮೀಪದ ಸಮುದ್ರದ ದಡದಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಸಾರ್ವಜನ...