ಬೆಳಗಾವಿ: ಹುಲಿ ಉಗುರು ಹಾಗೂ ಆನೆಯ ದಂತದಿಂದ ಮಾಡಲಾಗಿದ್ದ ಕಡಗಳನ್ನು ಹೊಂದಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಸಂಚಾರಿ ದಳ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಶಹಾಪುರದ ಕಾಕೇರಿ ಚೌಕ್ ನಿವಾಸಿ ಶ್ರೀರಾಮ ಅರ್ಜುನಸಾ ಬಾಕಳೆ (46) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಆನೆಯ ದಂತದಿಂದ ಮಾಡಲಾಗಿರುವ 2 ಕಡಗ ಹಾಗೂ 5 ಹುಲಿ ಉಗ...