ಚರಿತ್ರೆಯ ಕಂದಕಗಳನ್ನು ತೋಡುತ್ತಲೇ ಸಮಕಾಲೀನ ಇತಿಹಾಸದ ಹೆಜ್ಜೆಗುರುತುಗಳನ್ನು ಅಳಿಸಿ ಹಾಕುತ್ತಾ ಹೊಸ ಇತಿಹಾಸವನ್ನು ಬರೆಯುವ ಒಂದು ವಿಕೃತ ಸಾಂಸ್ಕೃತಿಕ ಪರಂಪರೆಗೆ ಭಾರತ ಕರ್ಮಭೂಮಿಯಾಗಿ ಪರಿಣಮಿಸುತ್ತಿದೆ. ಚರಿತ್ರೆಯಲ್ಲಿ ಆಗಿಹೋದ ದುರಂತಗಳನ್ನು ಭವಿಷ್ಯದ ಸೌಧಗಳಿಗೆ ಅಡಿಗಲ್ಲುಗಳಂತೆ ಬಳಸುವ ಒಂದು ಚಾಣಾಕ್ಷ ತಂತ್ರದ ಶೋಧದಲ್ಲಿ #ಆತ್ಮನಿರ್ಭರ...