ಮಂಗಳೂರಲ್ಲಿ ಗಾಂಜಾ ಮತ್ತು ಚರಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಬಜಗೋಳಿಯ ಸುಖೇತ್ ಕಾವಾ ಯಾನೆ ಚುಕ್ಕಿ(33), ತಮಿಳುನಾಡಿನ ಅರವಿಂದ (24), ಕಾರ್ಕಳದ ಸುನೀಲ್ (32) ಬಂಧಿತ ಆರೋಪಿಗಳು. ಬಂಧಿತರಿಂದ 500 ಗ್ರಾಂ ಚರಸ್ ಮತ್ತು 1 ಕೆ.ಜಿ.ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ....
ಮಂಗಳೂರಲ್ಲಿ ಗಾಂಜಾ ಘಾಟು ಮತ್ತಷ್ಟು ಜೋರಾಗಿದೆ. ಮೊನ್ನೆಯಷ್ಟೇ ಮಂಗಳೂರು ನಗರದ ಪ್ರತಿಷ್ಠಿತ ಎರಡು ವೈದ್ಯಕೀಯ ಕಾಲೇಜುಗಳ ವೈದ್ಯರು ಭಾಗಿಯಾಗಿರುವ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಮತ್ತೆ ಇಬ್ಬರು ವೈದ್ಯರನ್ನು ಇಂದು ಬಂಧಿಸಿದ್ದಾರೆ. ಆಂಧ್ರಪ್ರದೇಶದ ರಾಘವ ದತ್ತಾ(2...
ಶಿರಾಡಿ ಸಾಯಿಬಾಬಾ ದರ್ಶನ ಪಡೆಯಲು ತೆರಳುತ್ತಿದ್ದ ಭಕ್ತರ ಬಸ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ 7 ಮಹಿಳೆಯರ ಸಹಿತ 10 ಮಂದಿ ಸಾವನ್ನಪ್ಪಿದ ಘಟನೆ ನಾಸಿಕ್ ನ ಸಿನ್ನಾರ್ ಹೆದ್ದಾರಿಯಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಸುಮಾರು 40ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮುಂಬೈನಿಂದ ಸುಮಾರು 180 ಕಿ.ಮೀ ದ...
ಮೂಡಿಗೆರೆ: ಎಲೆಕ್ಷನ್ ಗೆ ನಿಲ್ಲಲು ಮಾತ್ರವೇ ನಯನಾ ಮೋಟಮ್ಮ ಎಸ್ಸಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ಗಂಡ ಒಬ್ಬ ಮಾರ್ವಾಡಿ, ಅದೂ ಕೂಡ ಬಾಂಬೆಯವರು, ನಯನ ಬಾಂಬೆಯಲ್ಲಿ ಎಲೆಕ್ಷನ್ ಗೆ ನಿಲ್ಲಲಿ, ಮೂಡಿಗೆರೆಯಲ್ಲಿ ಯಾಕೆ ನಿಲ್ಲಬೇಕು ಎಂದು ಕಾಂಗ್ರೆಸ್ ನ ಭಿನ್ನಮತ ತಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಗೋಣಿಬೀಡು ಹೋಬಳಿಯಲ್ಲಿ ಬಂಡಾಯದ...
ಬೆಂಗಳೂರು: ತುಮಕೂರು ರಾಷ್ಟ್ರೀಯ ಹೆದ್ದಾರಿಯ ಪೀಣ್ಯ ಫ್ಲೈಓವರ್ ನಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಮತ್ತೆ ಸಂಕಷ್ಟ ಆರಂಭವಾಗಿದ್ದು, ಮುಂದಿನ 125 ದಿನಗಳ ಕಾಲ ಫ್ಲೈಓವರ್ ಮೇಲೆ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ವರದಿಗಳ ಪ್ರಕಾರ ಫ್ಲೈಓವರ್ ನ ಎಲ್ಲ ಪಿಲ್ಲರ್ ಗಳಲ್ಲಿ ಕೇಬಲ್ ಕಿತ್ತು ಬರುವ ಆತಂಕದ ಹಿನ್ನೆಲೆಯಲ್ಲಿ ಮತ್ತೆ ಸಂಚ...
ಚಾಮರಾಜನಗರ: ಸ್ಯಾಂಟ್ರೋ ರವಿ ಇಷ್ಟು ದಿನಗಳಾದರೂ ಸಿಕ್ಕಿ ಬೀಳದಿರಲು ಪ್ರಭಾವಿಗಳ ರಕ್ಷಣೆ ಇರಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಸಂಶಯ ಹೊರಹಾಕಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸ್ಯಾಂಟ್ರೋ ರವಿಯನ್ನು ಕೂಡಲೇ ಬಂಧಿಸಬೇಕು. ಬಡ ಹೆಣ್ಣುಮಕ್ಕಳನ್ನು ಬಳಸಿಕೊಂಡು ದಂಧೆ ಮಾಡುತ್ತಿದ್ದ ವಿಷ...
ಬೆಳ್ತಂಗಡಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಶಾಸಕ ಹಿರಿಯ ಕಾಂಗ್ರೆಸ್ ಮುಖಂಡ ಕೆ.ವಸಂತ ಬಂಗೇರ ಅವರು ಹೇಳಿದ್ದಾರೆ. ಬೆಳ್ತಂಗಡಿಯಲ್ಲಿ ಇಂದು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಾನು ವಿಧಾನಸಭಾ ಟಿಕೆಟ್ ಗಾಗಿನ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದರು. ಆರ್ಥಿಕ ಸಮಸ್ಯೆಗಳನ್ನು ಎ...
ಬೆಂಗಳೂರು: ಕೋಲಾರದಲ್ಲಿ ತಾನು ಸ್ಪರ್ಧಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಘೋಷಿಸಿ ಕೊಂಡಿದ್ದರು. ಈ ವಿಚಾರ ರಾಜ್ಯಾದ್ಯಂತ ಭಾರೀ ಚರ್ಚೆಗೀಡಾಗಿತ್ತು. ಆದರೆ ಈ ವಿಚಾರ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತೇ ಇಲ್ವಂತೆ! ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮ...
ಚಾಮರಾಜನಗರ: ತಮಿಳುನಾಡು ಸಾರಿಗೆ ಸಂಸ್ಥೆ ಬಸ್ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿರುವ ಘಟನೆ ಚಾಮರಾಜನಗರ ಸಮೀಪದ ತಮಿಳುನಾಡಿನ ಅಸನೂರು ಹತ್ತಿರದ ಗೇರೆಮಾಲ ಬಳಿ ನಡೆದಿದೆ. ಸತ್ಯಮಂಗಲಂಗೆ ತೆರಳುತ್ತಿದ್ದ ಬಸ್ ನ ಎದುರು ಏಕಾಏಕಿ ಪ್ರತ್ಯಕ್ಷಗೊಂಡ ಆನೆಯೊಂದು ಬಸ್ ನ್ನು ಹಿಮ್ಮೆಟ್ಟಿಸುತ್ತಾ ಬಂದು ಗಾಜನ್ನು ಒಡೆದು ಹಾಕಿದೆ. ಆನೆ ದಾಳಿಯಿಂ...
ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೆಯ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ನಡೆದಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಸಜಿಪ ನಿವಾಸಿ ರಾಜೇಶ್ ಪೂಜಾರಿ ಸ್ಥಾನಮನೆ(36) ಎಂದು ಗುರುತಿಸಲಾಗಿದೆ. ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಇಂದು ಬೆಳಗ್ಗೆ ದ್ವಿಚಕ್ರ ವಾಹನವೊಂದು ಅನ...