ಕೊಲಂಬಿಯಾದ 2ನೇ ಅತಿದೊಡ್ಡ ನಗರ ಮೆಡೆಲಿನ್'ನ ವಸತಿ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ಜನ ವಸತಿ ಪ್ರದೇಶದಲ್ಲೇ ಪತನಗೊಂಡಿದೆ. ಮೇಯರ್ ಡೇನಿಯಲ್ ಕ್ವಿಂಟೆರೊ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕೊಲಂಬಿಯಾದ ಎರಡನೇ ಅತಿದೊಡ್ಡ ನಗರ ಮೆಡೆಲಿನ್ ನ ವಸತಿ ಪ್ರದೇಶಕ್ಕೆ ಸಣ್ಣ ವಿಮಾನವೊಂದು ಸೋಮವಾರ ಅಪ್ಪಳಿಸಿದೆ ಎಂದು ತಿಳಿಸಿದ್ದಾರೆ. ಸಂತ್...
ಬೆಂಗಳೂರು: ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಅಧಿಕಾರ ಯಾರಿಗೂ ಇಲ್ಲ, ಅಭ್ಯರ್ಥಿಗಳ ಆಯ್ಕೆಯನ್ನು ಹೈಕಮಾಂಡ್ ಮಾಡುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿರುವ ವಿಚಾರವಾಗಿ ಪ್ರತ...
ನವದೆಹಲಿ: ಜನಪ್ರಿಯ ಪಾನೀಯ ರಸ್ನಾದ ಸಂಸ್ಥಾಪಕ ಅರೀಜ್ ಪಿರೋಜ್ ಶಾ ಖಂಬಟ್ಟಾ ಅವರು ಅಹ್ಮದಾಬಾದ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕಂಪೆನಿ ಸೋಮವಾರ ಮಾಹಿತಿ ನೀಡಿದೆ. 85 ವರ್ಷದ ವಯಸ್ಸಿನ ಅರೀಜ್ ಪಿರೋಜ್ ಶಾ ಖಂಬಟ್ಟಾ ದೀರ್ಘಕಾಲದ ಅನಾರೋಗ್ಯದೊಂದ ಬಳಲುತ್ತಿದ್ದರು. ನವೆಂಬರ್ 19ರಂದು ಅವರು ಕೊನೆಯುಸಿರೆಳೆದಿದ್ದಾರೆ. ಅವ...
ಗುಜರಾತ್ ನ ಮೊರ್ಬಿ ಪಟ್ಟಣದಲ್ಲಿ ಕಳೆದ ತಿಂಗಳು ಸಂಭವಿಸಿದ ತೂಗು ಸೇತುವೆ ಕುಸಿತದಿಂದಾದ 135 ಜನರ ಸಾವಿನ ಘಟನೆ ಹಿಂದಿರುವ ''ನಿಜವಾದ ಅಪರಾಧಿಗಳು' ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ರಾಜ್ ಕೋಟ್ ನಲ್ಲಿ ಚುನಾವಣಾ ಪ್ರಚಾರದಲ್...
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಾಗೂ ಧರ್ಮಸ್ಥಳ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುವ 26 ಕೋಟಿ ವೆಚ್ಚದ ನೂತನ ಯೋಜನೆಗೆ ರಾಜ್ಯ ಸರಕಾರದ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜು ಅವರು ಸೋಮವಾರ ಶಿಲಾನ್ಯಾಸ ನೆರವೇರಿಸಿದರು. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನೂತನ ಕುಡಿಯುವ ನೀರಿನ ಯೋಜನೆ ಅನು...
ಉಡುಪಿ: ಉಡುಪಿ ತಾಲೂಕು ತೆಂಕನಿಡಿಯೂರು ಗ್ರಾಮದ ತೊಟ್ಟಂ ನಿವಾಸಿ ರೂಪಾ (26 ವರ್ಷ) ಎಂಬ ಮಹಿಳೆಯು ನವೆಂಬರ್ 13 ರಂದು ಬೆಳಗ್ಗೆ 6:30ರ ಸುಮಾರಿಗೆ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 1 ಇಂಚು ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು ಹೊಂದಿದ್ದು, ಕನ್ನಡ, ಹಿಂದಿ, ನೇಪಾಳಿ ಹಾಗೂ...
ಉಡುಪಿ: ಶಾಲಾ ಕಾಲೇಜುಗಳಲ್ಲಿನ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕೋಟ ಪೊಲೀಸರು ನ.21ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಆವರ್ಸೆ ಗ್ರಾಮದ ಬಳಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ತಮಿಳುನಾಡು ರಾಜ್ಯದ ಸೇಲಂ ನಿವಾಸಿ ಕುಮಾರಸ್ವಾಮಿ(59) ಹಾಗೂ ಪಡುಬಿದ್ರಿ ಹೆಜಮಾಡಿ ಎಸ್ಎಸ್ ರಸ್ತೆಯ ಜಾಹೀದ ಸಿನಾನ್(32) ಎಂದು ಗುರ...
ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ಆಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ಸರ್ವಪಕ್ಷಗಳ ಸಭೆ ಕರೆದು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಬೆಳಗಾವಿ ಗಡಿವಿವಾದದ ಬಗ್ಗೆ ನವಂಬರ್ 23...
ಮಂಗಳೂರು ನಗರದ ಬಿಜೈಯಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ವೊಂದು ಆತಂಕ ಸೃಷ್ಟಿಸಿದ ಪ್ರಸಂಗ ಇಂದು ನಡೆದಿದೆ. ಬಸ್ ನಿಲ್ದಾಣದ ಅನುಮಾನಾಸ್ಪದ ಬ್ಯಾಗ್ ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಬಾಂಬ್ ಸ್ಕ್ಯಾಡ್ , ಶ್ವಾನದಳ ಅದನ್ನು ಪರಿಶೀಲನೆ ನಡೆಸಿತು. ಈ ನಡುವೆ ಬ್ಯಾಗ್ ವಾರಸುದಾರ ಪತ್ತೆಯಾಗಿದ್ದು, ಅದ...
ಕಾರ್ಕಳ: ತಾಲೂಕಿನ ಬೋಳ ಕೆದಿಂಜೆ ಸಮೀಪದ ಮಂಜರಪಲ್ಕೆಯಲ್ಲಿ ಕಾಪು ತಾಲೂಕಿನ ಉಚ್ಚಿಲ ಮೂಲದ ಕಿಯಾ ಕಾರೊಂದು ಕಣಿವೆಗೆ ಉರುಳಿದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಕಾರಿನಲ್ಲಿ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ 7 ಮಂದಿ ಪ್ರಯಾಣಿಸುತ್ತಿದ್ದು, ಅವರಲ್ಲಿ ಓರ್ವ ಮೃತಪಟ್ಟಿದ್ದಾರೆ. ಉಡುಪಿಯ ಖಾಸಗಿ ಕಾಲೇಜಿನಲ್ಲಿ ಓದುತ್ತಿರು...