ಜೇಮ್ಸ್ ಚಿತ್ರ ಬಿಡುಗಡೆಯಾಗಿರುವುದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಒಂದೆಡೆ ಸಂತಸ ತಂದಿದ್ದರೆ, ಇನ್ನೊಂದೆಡೆ ಅಪ್ಪು ಇಲ್ಲ ಎನ್ನುವ ನೋವು ಖಂಡಿತವಾಗಿಯೂ ಕಾಡಿದೆ. ಇಂದು ಕರ್ನಾಟಕದಾದ್ಯಂತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಗೆ ಅಭಿಮಾನಿಗಳಿಂದ ಅದ್ದೂರಿಯ ಸ್ವಾಗತ ದೊರೆತಿದೆ. 70 ಅಡಿ ಎತ್ತರ ಕಟ...