ಮಂಗಳೂರು: ಮಳಲಿಪೇಟೆ ಮಸೀದಿಯಲ್ಲಿ ದೇವಾಲಯ ಮಾದರಿಯ ರಚನೆ ಪತ್ತೆಯಾಗಿದೆ ಎನ್ನಲಾದ ವಿಚಾರ ಸಂಬಂಧ ಸಲ್ಲಿಕೆಯಾಗಿರುವ ಅಸಲು ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸಲು ಹೈಕೋರ್ಟ್ ಸಮ್ಮತಿ ನೀಡಿದ್ದು, ಯಾವುದೇ ಆದೇಶ ಹೊರಡಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಮಂಗಳೂರಿನ ತೆಂಕಳ್ಳಿಪಡಿ ಗ್ರಾಮದ ಧನಂಜಯ್ ಸಲ್ಲಿಸಿರುವ ತಕರ...