ಶಾವರ್ಮಾ ಎಂದರೆ ಸಾಕು, ಸಣ್ಣ ಮಕ್ಕಳಿಂದ ಹಿಡಿದು, ಹಿರಿಯರವರೆಗೆ ಇದನ್ನು ಎಲ್ಲರೂ ತುಂಬಾ ಇಷ್ಟಪಡುತ್ತಾರೆ. ಭಾರತಕ್ಕೆ ಟರ್ಕಿ ದೇಶದ ಸಂಪರ್ಕವಾದ ಬಳಿಕ ಭಾರತೀಯರಿಗೆ ಈ ಶಾವರ್ಮಾ ಪರಿಚಯವಾಯಿತು. ರುಚಿಕರವಾಗಿರುವ ಶಾವರ್ಮಾ ಮಕ್ಕಳ ಅಚ್ಚುಮೆಚ್ಚಿನ ಆಹಾರವಾಗಿದೆ. ಆರಂಭದಲ್ಲಿ ಕುರಿ ಮಾಂಸವನ್ನು ಬಳಸಿ ಟರ್ಕಿ ದೇಶದವರು ಶಾವರ್ಮಾವನ್ನು ತಯಾರಿಸ...