ರಾಯಚೂರು: ಮೊಹರಂ ಹಬ್ಬದ ಆಚರಣೆಯ ವೇಳೆ ವಿದ್ಯುತ್ ತಂತಿಗೆ ಪಂಜಾ ಸ್ಪರ್ಶಗೊಂಡು ಪಂಜಾ ಹಿಡಿದಿದ್ದ ವ್ಯಕ್ತಿ ಹಾಗೂ ಕಾಲಿಗೆ ನಮಸ್ಕರಿಸುತ್ತಿದ್ದ ಮಹಿಳೆ, ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ ಎಂದು ವರದಿಯಾಗಿದೆ. 50 ವರ್ಷ ವಯಸ್ಸಿನ ಹುಸೇನಸಾಬ ದೇವರಮನಿ ಹಾಗೂ 18 ವರ್ಷ ವಯಸ್ಸಿನ ಹುಲಿಗೆಮ್ಮ ಮೃತಪಟ್ಟವರಾಗಿದ್ದಾರೆ...