ಕೇರಳದಲ್ಲಿ ಭಾರೀ ಚರ್ಚೆಗೀಡಾಗಿದ್ದ ಸಲಿಂಗ ಪ್ರೇಮಿಗಳಾದ ಆದಿಲಾ ನಸ್ರೀನ್ ಮತ್ತು ಫಾತಿಮಾ ನೂರಾ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇವರಿಬ್ಬರ ಸಂಬಂಧವನ್ನು ದೂರ ಮಾಡಲು ಪೋಷಕರು ಸಾಕಷ್ಟು ಸರ್ಕಸ್ ನಡೆಸಿದ್ದರು. ಕೊನೆಗೆ ಬಲವಂತವಾಗಿ ಇಬ್ಬರನ್ನೂ ಬೇರ್ಪಡಿಸಿದ್ದರು. ಆದರೆ ಈ ಜೋಡಿ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯವ...