ಪುತ್ರ, ಸಹೋದರ ಮತ್ತು ಸ್ನೇಹಿತರ ಎದುರಲ್ಲೇ ಬೀಚ್ ನಲ್ಲಿ ನೀರಾಟವಾಡುತ್ತಿದ್ದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳೂರು ನಗರದ ಉಳ್ಳಾಲದ ಸೋಮೇಶ್ವರದಲ್ಲಿ ನಡೆದಿದೆ. ಪ್ರಶಾಂತ್ (47), ಮೃತ ವ್ಯಕ್ತಿ. ಮಂಗಳೂರಿನ ಖಾಸಗಿ ಕಾಲೇಜಲ್ಲಿ ಬಸ್ ಚಾಲಕರಾಗಿದ್ದ ಅವರು, ಇಂದು ಪುತ್ರನಾದ ಚಿರಾಯು, ಸಹೋದರನ ಮಗ ವಂದನ್ ಮತ್ತು ಇ...