ನವದೆಹಲಿ: ಜನಪ್ರಿಯ ಪಾನೀಯ ರಸ್ನಾದ ಸಂಸ್ಥಾಪಕ ಅರೀಜ್ ಪಿರೋಜ್ ಶಾ ಖಂಬಟ್ಟಾ ಅವರು ಅಹ್ಮದಾಬಾದ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕಂಪೆನಿ ಸೋಮವಾರ ಮಾಹಿತಿ ನೀಡಿದೆ. 85 ವರ್ಷದ ವಯಸ್ಸಿನ ಅರೀಜ್ ಪಿರೋಜ್ ಶಾ ಖಂಬಟ್ಟಾ ದೀರ್ಘಕಾಲದ ಅನಾರೋಗ್ಯದೊಂದ ಬಳಲುತ್ತಿದ್ದರು. ನವೆಂಬರ್ 19ರಂದು ಅವರು ಕೊನೆಯುಸಿರೆಳೆದಿದ್ದಾರೆ. ಅವ...