ತಿರುವನಂತಪುರಂ: ಮದುವೆ ಎಂದರೆ, ಮಂಟಪದಲ್ಲಿಯೋ , ಮನೆಯಲ್ಲಿಯೋ ಅಥವಾ ರಿಜಿಸ್ಟರ್ ಆಫೀಸ್ ನಲ್ಲಿಯೋ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಇಲ್ಲೊಂದು ಮದುವೆ ಆಸ್ಪತ್ರೆಯಲ್ಲಿ ನಡೆದಿದೆ. ತಿರುವನಂತಪುರಂ ನಿವಾಸಿ ಮನೋಜ್ ಮತ್ತು ರೇವತಿ ಎಂಬ ಜೋಡಿಗೆ ಆಸ್ಪತ್ರೆಯೊಂದರಲ್ಲಿ ವಿವಾಹವಾಗಿದೆ. ಫೆ.4ರಂದು ಇವರ ಮದುವೆ ನಡೆಯಬೇಕಿತ್ತು. ಆದರೆ ಮನೋಜ್ ತ...