ಪ್ರಾಜೆಕ್ಟ್ ಚೀತಾ ಯೋಜನೆಯಲ್ಲಿ ಈಗಾಗಲೇ ನಮೀಬಿಯಾದಿಂದ ಭಾರತಕ್ಕೆ ಎಂಟು ಚಿರತೆಗಳನ್ನು ವಿಶೇಷ ವಿಮಾನದಲ್ಲಿ ತಂದಿರೋದು ನಿಮಗೆಲ್ಲಾ ಗೊತ್ತಾಗಿದೆ. ನಮೀಬಿಯಾದಿಂದ ಚೀತಾ ತರುವ ತಂಡದಲ್ಲಿ ಭಾರತೀಯ ಪಶುವೈದ್ಯರಾಗಿ ವನ್ಯಜೀವಿ ತಜ್ಞರಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯ ಕುಟುಂಬದ ಸನತ್ ಕೃಷ್ಣ ಮುಳಿಯ ಕೂಡ ಪಾಲ್ಗೊಂಡಿದ್ದರು. ಅರಿವಳಿಕ...