ತೆಲಂಗಾಣ: ದಲಿತರು ಸಂಭ್ರಮಿಸಿದರೆ, ಮೇಲು ಜಾತಿ ಎಂದು ಎನಿಸಿಕೊಂಡವರಿಗೆ ನವರಂಧ್ರಗಳಲ್ಲೂ ಉರಿ ಆರಂಭವಾಗಿರುತ್ತದೆ. ಅನಗತ್ಯವಾಗಿ ಅವರ ಮೇಲೆ ಬಿದ್ದು ಹಿಂಸೆಗೆ ತೊಡಗುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ತೆಲಂಗಾಣದ ಸಿರಿಸಿಲ್ಲಾದ ರಾಮೋಜಿಪೇಟದಲ್ಲಿ ದಸರ ಸಂದರ್ಭದಲ್ಲಿ ನಡೆದ ಹಿಂಸಾಚಾರವು ಪೂರ್ವ ನಿಯೋಜಿತ ದಾಳಿ ಎನ್ನುವುದು ಬಯಲಾಗಿದೆ. ...