ಬೆಂಗಳೂರು: ನಾಲ್ಕು ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ನಟರಾಜನ್ ಅವರ ಆರೋಗ್ಯದಲ್ಲಿ ನಿನ್ನೆ ಏರುಪೇರಾಗಿತ್ತು. ಇದೀಗ ಅವರ ಆರೋಗ್ಯದ ವಿಚಾರವಾಗಿ ವರದಿಗಳು ಬಂದಿದ್ದು, ಅವರಿಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವೈದ್ಯರು ಶಶಿಕಲಾ ಅವರನ್ನು ಆರ್ ಟಿಪಿಸಿಆರ್ ಕೋವಿಡ್ ಪರ...