ನವದೆಹಲಿ: ತಾನು ಭಾರತಕ್ಕೆ ಮರಳಿದರೆ ಮಾತ್ರ ಕೊವಿಡ್ 19 ಕೊನೆಯಾಗುತ್ತದೆ ಎಂದು ದೇವಮಾನವ, ಲೈಂಗಿಕ ಕಿರುಕುಳ ಆರೋಪಿ ಸ್ವಾಮಿ ನಿತ್ಯಾನಂದ ಹೇಳಿಕೆ ನೀಡಿರುವ ವಿಡಿಯೋ ಬಿಡುಗಡೆಯಾಗಿದೆ. ಎರಡು ದಿನಗಳ ಹಿಂದೆ ಬಿಡುಗಡೆಯಾಗಿರುವ ವಿಡಿಯೋದಲ್ಲಿ, ಭಕ್ತರೊಬ್ಬರು, ಭಾರತ ಯಾವಾಗ ಕೊರೊನಾದಿಂದ ಮುಕ್ತವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್...