ಗದಗ: ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ತುಂಗಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ಮೂಲದ ಶರಣಗೌಡ (15), ಹೊಸಪೇಟೆ ಮೂಲದ ಅಖಿಲೇಶ್ (15) ನೀರುಪಾಲಾದ ವಿದ್ಯಾರ್ಥಿಗಳು. ಈ ಘಟನೆ ಮುಂಡರಗಿ ತಾಲೂಕಿನ ಸಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನ ಬಳಿಯ ನದಿಯಲ್ಲಿ ನಡೆದಿದೆ. ಓರ್ವ ವ...