ಯುಎಇ ಸರಕು ಹಡಗು ಇರಾನ್ ನಲ್ಲಿ ಮುಳುಗಿದ್ದು, ಇಲ್ಲಿನ ಅಸಲುಯಾ ಕರಾವಳಿ ಭಾಗದಲ್ಲಿ ಇಂದು ಬೆಳಿಗ್ಗೆ ಭಾರಿ ಚಂಡಮಾರುತ ಅಲೆಗಳಿಗೆ ಸಿಲುಕಿ ಹಡಗು ಮುಳುಗಿದೆ ಎನ್ನಲಾಗಿದೆ. ಹಡಗಿನಲ್ಲಿ ಭಾರತೀಯರು ಸೇರಿದಂತೆ 30 ಸಿಬ್ಬಂದಿ ಇದ್ದರು. ಇದರಲ್ಲಿ ಇಬ್ಬರನ್ನು ಹೊರತುಪಡಿಸಿ, ಉಳಿದವರನ್ನು ರಕ್ಷಿಸಲಾಗಿದೆ ಎಂದು ಹಡಗು ಮಾಲೀಕತ್ವದ ಕಂಪನಿಯನ...