ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಮಾಣಿ ಬದಿಗುಡ್ಡೆ ಉದಯ ಚೌಟ ಅವರು ಅನಾರೋಗ್ಯದಿಂದ ಮೇ 21 ಮುಂಜಾನೆ ನಿಧನರಾದರು. 2007ರ ಕಬಡ್ಡಿ ವಿಶ್ವಕಪ್ ಪಂದ್ಯಾಟದ ಭಾರತದ ತಂಡದಲ್ಲಿದ್ದ ಚೌಟರು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕಬಡ್ಡಿ ವಿಶ್ವಕಪ್ ಗೆಲ್ಲುವ ಮೂಲಕ ನಮ್ಮ ದೇಶಕ್ಕೆ, ರಾಜ್ಯಕ್ಕೆ ಕೀರ್ತಿ ತಂದಿದ್ದರು...