ಉಡುಪಿ: ದೇಶದ ಪ್ರತಿಷ್ಠಿತ ಉದ್ಯಮಿ ಅದಾನಿ ಅವರ ಯುಪಿಸಿಎಲ್ ಕಂಪೆನಿ ಉಡುಪಿಯ ಜನರ ಕಿವಿಗೆ ಹೂವಿಟ್ಟಿದೆ. ಈ ಮೂಲಕ ಉದ್ಯೋಗದ ಆಸೆಯಿಂದ ಕಾಯುತ್ತಿದ್ದ ಯುವಕರು ಇದೀಗ ನಿರಾಶರಾಗಿ ಆಕಾಶ ನೋಡುವಂತಾಗಿದೆ. ಈ ಕಂಪೆನಿ ನಿರ್ಮಾಣದ ಸಂದರ್ಭದಲ್ಲಿ ಶೈಕ್ಷಣಿಕ ಅರ್ಹತೆಯ ಯೋಗ್ಯವಾದ ಉದ್ಯೋಗದ ಭರವಸೆ ನೀಡಿದ್ದ ಕಂಪೆನಿ ಭೂಸ್ವಾಧೀನ ಮಾಡಿಕೊಂಡಿತ್ತು. ...