ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಎರಡು ವರ್ಷಗಳ ಹಿಂದೆ ಕಳ್ಳತನ ಆಗಿದ್ದ ಪಂಚಲೋಹದ ಉತ್ಸವ ಮೂರ್ತಿ ಉಪೇಕ್ಷಿತ ಸ್ಥಿತಿಯಲ್ಲಿ ದೇವಸ್ಥಾನದ ಆವರಣ ಗೋಡೆಯ ಹೊರಗೆ ಕಾಡು ಪೊದೆಗಳೆಡೆಯಲ್ಲಿ ಪತ್ತೆಯಾಗಿದೆ. ಸಂಜೆ ಇಲ್ಲಿ ಮಕ್ಕಳು ಫುಟ್ಬಾಲ್ ಆಟವಾಡುತ್ತಿದ್ದಾಗ ಪೊದೆಗಳತ್ತ ನೆಗೆದ ಚೆಂಡನ್ನು ಹೆಕ್ಕಲೆಂದು ಹೋದಾಗ ಮೂರ್ತಿ ಪತ್ತೆ...