2:17 AM Wednesday 15 - October 2025

ನದಿ ದಂಡೆಯಲ್ಲಿ ಯುವತಿಯ ಮೃತದೇಹ ಪತ್ತೆ | ಅತ್ಯಾಚಾರ-ಕೊಲೆಯ ಶಂಕೆ

12/11/2020

ತಂಜೂರು: ತಮಿಳುನಾಡಿನ  ತಂಜೂರು ಜಿಲ್ಲೆಯ ತಿರುಕಟ್ಟುಪಲ್ಲಿ ಎಂಬಲ್ಲಿನ ಕೊಲ್ಲಿಡಂ ನದಿ ದಂಡೆಯಲ್ಲಿ ಯುವತಿಯೊಬ್ಬಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೀಗ ಯುವತಿಯ ಸಾವಿನ ಬಗ್ಗೆ ನಾನಾ ರೀತಿಯ ಅನುಮಾನಗಳು ಆರಂಭವಾಗಿದೆ.

ಗ್ರಾಮಸ್ಥರು ಯುವತಿಯ ಮೃತದೇಹವನ್ನು ಮೊದಲು ನೋಡಿದ್ದಾರೆ.  ಸುಮಾರು 25 ವರ್ಷದ ಯುವತಿಯ ಮೃತದೇಹ ಇದಾಗಿದೆ. ಮೃತದೇಹದ ಮೇಲೆ ಯಾವುದೇ ಬಟ್ಟೆ ಕೂಡ ಇಲ್ಲವಾಗಿರುವುದರಿಂದ ಅತ್ಯಾಚಾರ ಎಸಗಿ ಹತ್ಯೆ ಮಾಡಿ, ಮೃತದೇಹ ನದಿಯ ಬದಿಯಲ್ಲಿ ಹೂತು ಹಾಕಲಾಗಿದೆಯೇ ಎನ್ನುವ ಅನುಮಾನಗಳಿಗೆ ಕಾರಣವಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ.  ಯುವತಿಯ ಸಾವಿಗೆ ಕಾರಣ ಏನು ಎಂಬ ಬಗ್ಗೆ ಮಾಹಿತಿ ಪಡೆದು ಪೊಲೀಸರು ಮುಂದಿನ ಕ್ರಮಕೈಗೊಳ್ಳಲಿದ್ದಾರೆ.

ಇತ್ತೀಚಿನ ಸುದ್ದಿ

Exit mobile version