4:13 AM Thursday 23 - October 2025

ತನಿಖೆಗೆ ಡಿವೈಎಸ್ ಪಿನ ಅಲ್ಲಿ ಹಾಕಿಸಿಕೊಂಡಿರುವುದೇ  ಧರ್ಮಸ್ಥಳದ ದೊಡ್ಡ ಯಜಮಾನ್ರುಗಳು:  ಸಿ.ಎಸ್.ದ್ವಾರಕಾನಾಥ್

c s dwaraknath
16/07/2025

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಕೊಲೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರ ವ್ಯಕ್ತಿಯೊಬ್ಬ ಸಾಕ್ಷಿ ಹೇಳಲು ಮುಂದೆ ಬಂದಿರುವ ಪ್ರಕರಣವನ್ನು ಎಸ್ ಐಟಿಗೆ ಒಪ್ಪಿಸುವಂತೆ ಸಿ.ಎಸ್.ದ್ವಾರಕ್ ನಾಥ್  ಹಾಗೂ ಬಾಳಣ್ಣ ನೇತೃತ್ವದ ವಕೀಲರ ತಂಡ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ  ಸಿ.ಎಸ್.ದ್ವಾರಕಾನಾಥ್,  ನಾನು ಬಾಳಣ್ಣ ಅವರು ನಮ್ಮ ಇತರ ವಕೀಲ ಸ್ನೇಹಿತರು  ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ,  ಧರ್ಮಸ್ಥಳದಲ್ಲಿ  ಆಗಿರುವಂತಹ ಮಾಸ್ ರೇಪ್ ಗಳು,  ಮಾಸ್ ಮರ್ಡರ್ ಗಳು, ಮಾಸ್ ಬರಿಯನ್ಸ್  ಇವುಗಳ ಬಗ್ಗೆ ನಾವು ಮಾತನಾಡಿದ್ವಿ ಎಂದು ತಿಳಿಸಿದ್ದಾರೆ.

ನಾವು ರೆಪ್ರಸೆಂಟೇಷನ್ ಕೊಟ್ಟಿದ್ದೀವಿ,  ನಮ್ಮ ಉದ್ದೇಶ ಏನಂದ್ರೆ,  ಈಗಾಗಲೇ ಅದು ಸುಪ್ರೀಂ ಕೋರ್ಟ್ ನ ಡೈರೆಕ್ಷನ್ಸ್ ಮೇಲೆ  ಇನ್ವೆಸ್ಟಿಗೇಷನ್ ನಡೆಯುತ್ತಿದೆ.  ಒಬ್ಬ ವ್ಯಕ್ತಿ ಈಗಾಗಲೇ ಮುಂದೆ ಬಂದಿದ್ದು, ಆ ವ್ಯಕ್ತಿಗೆ ಪ್ರೊಟೆಕ್ಷನ್ ಕೊಡಬೇಕಾಗುತ್ತದೆ, ಮತ್ತೊಂದು ಕಡೆ ಆ ವ್ಯಕ್ತಿ ತೋರಿಸುತ್ತಿರುವ ಜಾಗಗಳಿಗೆ ಎಕ್ಸ್ಯೂಮ್ ಮಾಡಬೇಕಾಗುತ್ತದೆ.  ಆ ಸಂದರ್ಭದಲ್ಲಿ ಅಲ್ಲಿ ಎಸ್ ಎಫ್ ಎಲ್ ಇರಬೇಕಾಗುತ್ತದೆ.  ವಿಡಿಯೋ ರೆಕಾರ್ಡಿಂಗ್ ಇರಬೇಕಾಗುತ್ತದೆ. ಅದೆಲ್ಲವನ್ನೂ ಮಾಡಬೇಕಾದರೆ, ಇದನ್ನು ಎಸ್ ಐಟಿಗೆ ಕೊಡಬೇಕು ಎಂದು ನಾವು ಕೇಳಿದ್ದೀವಿ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು,  ಕರ್ನಾಟಕದಲ್ಲಿರುವ ಪ್ರಾಮಾಣಿಕ ಹಿರಿಯ ಅಧಿಕಾರಿಯನ್ನು ಇನ್ವೆಸ್ಟಿಗೇಶನ್ ಗೆ ಹಾಕಬೇಕು,  ಇನ್ವೆಸ್ಟಿಗೇಶನ್, ಬಾಡಿನ ಎಕ್ಸ್ಯೂಮ್ ಮಾಡುವ ಸಂದರ್ಭದಲ್ಲಿ  ಫೋಟೋ ಗ್ರಾಫರ್ಸ್,  ಎಫ್ ಎಸ್ ಎಲ್ ಫಾರೆನ್ಸಿಕ್ ಸೈನ್ಸ್ ನವರು ಇರಬೇಕಾಗುತ್ತದೆ.  ಒಂದು ಕೂದ್ಲು ಸಿಕ್ಕಿದ್ರೂ, ಮೂಳೆ ಸಿಕ್ಕಿದ್ರೂ ಅದು ಯಾರದ್ದು ಎನ್ನುವುದನ್ನು ಕಂಡು ಹಿಡಿಯ ಬೇಕಾಗುತ್ತದೆ ಎಂದು ತಿಳಿಸಿದರು.

ಸದ್ಯಕ್ಕೆ ಒಬ್ಬ ಸಬ್ ಇನ್ಸ್ ಪೆಕ್ಟರ್  ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.  ಅದಕ್ಕೆ ಹೆಡ್ ಇರುವುದು ಒಬ್ಬ ಡಿವೈಎಸ್ ಪಿ,  ಆ ಡಿವೈಎಸ್ ಪಿನ ಅಲ್ಲಿ ಹಾಕಿಸಿಕೊಂಡಿರುವುದೇ  ಧರ್ಮಸ್ಥಳದ ದೊಡ್ಡ ಯಜಮಾನ್ರುಗಳು. ಹಾಗಾಗಿ  ಇದರ ತನಿಖೆ ಪ್ರಾಮಾಣಿಕವಾಗಿ ನಡೆಯುತ್ತದೆ ಎನ್ನುವ ನಂಬಿಕೆ ನಮಗ್ಯಾರಿಗೂ ಇಲ್ಲ. ಆ ಕಾರಣಕ್ಕಾಗಿ ಎಸ್ ಐಟಿ ತನಿಖೆ ಮಾಡಿಸಬೇಕು ಎಂದು ಅವರು ಒತ್ತಾಯಿಸಿದರು.  ನಮ್ಮ ಮನವಿಗೆ ಸಿಎಂ ಸಿದ್ದರಾಮಯ್ಯನವರು ಸ್ಪಂದಿಸಿದ್ದಾರೆ. ಪೊಲೀಸ್ ಆಫೀರ್ಸ್ ಜೊತೆಗೆ ಮಾತನಾಡಿ, ಇದನ್ನು ಗಂಭೀರವಾಗಿ ತೆಗೆದುಕೊಂಡು ರಿಯಾಕ್ಟ್ ಮಾಡಿದ್ದಾರೆ ಎಂದು ಅವರು ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version