ಆಶ್ರಮದಲ್ಲಿ ಡೆತ್ ನೋಟ್ ಬರೆದಿಟ್ಟು ಸಹೋದರಿಯರು ಸಾವಿಗೆ ಶರಣು!

agra
16/11/2023

ಆಗ್ರಾ: ಆಶ್ರಮದಲ್ಲಿ ವಾಸವಿದ್ದ ಸೋದರಿಯರಿಬ್ಬರು ಡೆತ್‌ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಆಘಾತಕಾರಿ ಘಟನೆ ಆಗ್ರಾದ ಬ್ರಹ್ಮಕುಮಾರಿ ಆಶ್ರಮದಲ್ಲಿ ನಡೆದಿದೆ.
ಸಾವಿಗೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ಸೋದರಿಯರು, ಆಶ್ರಮದ ನಾಲ್ವರು ಉದ್ಯೋಗಿಗಳ ಕಿರುಕುಳದಿಂದ ಸಾವಿನ ನಿರ್ಧಾರ ಕೈಗೊಂಡಿರುವುದಾಘಿ ಬರೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

37 ವರ್ಷ ಪ್ರಾಯದ ಏಕ್ತಾ ಹಾಗೂ 34 ವರ್ಷ ಪ್ರಾಯದ ಸಿಕ್ತಾ ಸಾವಿಗೆ ಶರಣಾದ ಸೋದರಿಯರು. ಇವರಿಬ್ಬರು ಆಗ್ರಾದ ಜಗನೇರ್ ಪ್ರದೇಶದಲ್ಲಿರುವ ಆಶ್ರಮದಲ್ಲಿ ಕಳೆದೊಂದು ವರ್ಷದಿಂದ ವಾಸ ಮಾಡುತ್ತಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ತಮ್ಮ ಡೆತ್‌ನೋಟನ್ನು ಬ್ರಹ್ಮಕುಮಾರಿಯರ ಗ್ರೂಪ್ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಸಹೋದರಿಯರು ವಾಟ್ಸಾಪ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆಶ್ರಮದ ನಾಲ್ವರು ಉದ್ಯೋಗಿಗಳು ನಮ್ಮ 25 ಲಕ್ಷದಷ್ಟು ಹಣವನ್ನು ಕಸಿದುಕೊಂಡಿದ್ದಾರೆ ಎಂದು ಸೋದರಿಯರು ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version