9:17 PM Friday 19 - September 2025

ತಿಹಾರ್ ಜೈಲಿಗೆ ಹೋಗಿ ಬಂದವರು ಲೋಕಾಯುಕ್ತ ದಾಳಿ ಬಗ್ಗೆ ಮಾತನಾಡುತ್ತಾರೆ: ಡಿಕೆಶಿ ವಿರುದ್ಧ ಕೆ.ಎಸ್.ಈಶ್ವರಪ್ಪ ಗರಂ

eshwarappa
03/03/2023

ಮೈಸೂರು: ತಿಹಾರ್ ಜೈಲಿಗೆ ಹೋಗಿ ಬಂದವರು ಈಗ ಲೋಕಾಯುಕ್ತ ದಾಳಿ ಬಗ್ಗೆ ಮಾತಾಡುತ್ತಿದ್ದಾರೆ ಲೋಕಾಯುಕ್ತ ದಾಳಿ ಬಗ್ಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮನೆಯಲ್ಲಿ ಎಷ್ಟು ಬಂಡಲ್ ಹಣ ಇತ್ತು ಎಷ್ಟು ಅಕ್ರಮ ದಾಖಲೆ ಇತ್ತು ಎಂಬುದನ್ನು ಜನರು ನೋಡಿದ್ದಾರೆ. ಡಿಕೆಶಿ ಈಗ ಬೇಲ್ ನಲ್ಲಿದ್ದಾರೆ, ಯಾವಾಗ ಜೈಲಿಗೆ ಹೋಗ್ತಾರೆ ಗೊತ್ತಿಲ್ಲ. ಇಂತಹವರು ಲೋಕಾಯುಕ್ತ ದಾಳಿ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ದಾಳಿ ಬಗ್ಗೆ ಸ್ಪಷ್ಟವಾದ ತನಿಖೆ ಆಗಬೇಕು, ಯಾರೇ ತಪ್ಪು ಮಾಡಿದ್ರೂ ತಪ್ಪೇ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಲೋಕಾಯುಕ್ತ ನಡೆಸಿದ ಈ ದಾಳಿಯಿಂದ ಬಿಜೆಪಿಗೇನು ಮುಜುಗರವಿಲ್ಲ. ಸಾವಿರಾರು ಕೋಟಿ ಲೂಟಿ ಮಾಡಿ ಸಿಕ್ಕಿಬಿದ್ದ ಡಿಕೆಶಿಗೆ ಮುಜುಗರ ಇಲ್ಲ,  ಅಂದಮೇಲೆನಮಗೇಕೆ ಮುಜುಗರವಾಗುತ್ತದೆ ಹೇಳಿ. ಸಿಕ್ಕಿರುವ ಹಣದ ಬಗ್ಗೆ ನಮಗೆಲ್ಲ ಎಬಿಸಿಡಿಯೂ ಗೊತ್ತಿಲ್ಲ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

 

ಇತ್ತೀಚಿನ ಸುದ್ದಿ

Exit mobile version