5:44 AM Wednesday 15 - October 2025

ಗರ್ಭಿಣಿ ಹಸುವಿನ ಹೊಟ್ಟೆ ಬಗೆದು ಕರುವನ್ನು ತಿಂದ ಹುಲಿ: ಹುಲಿ ದಾಳಿಗೆ 3 ಹಸು ಸಾವು

tiger attack
25/11/2022

ಕೊಟ್ಟಿಗೆಹಾರ: ಕಾಫಿನಾಡಲ್ಲಿ ಹುಲಿಯ ಅಟ್ಟಹಾಸ ಮುಂದುವರಿದಿದ್ದು, ಭಾರತಿಬ್ಯೆಲು,  ಕನ್ನಗೆರೆ ಕಣ್ಣ ಕಾಪಿ ಎಸ್ಟೇಟ್ ನಲ್ಲಿ ನಿನ್ನೆ ರಾತ್ರಿ ಸಮಯದಲ್ಲಿ ಹುಲಿಯ ದಾಳಿಗೆ ಸುಮಾರು 3 ಹಸುಗಳು ಪ್ರಾಣ ಬಿಟ್ಟಿವೆ. ಒಂದು ಹಸು ಹುಲಿಯಿಂದ ತಪ್ಪಿಸಿಕೊಂಡು,  ಜೀವ ಉಳಿಸಿಕೊಂಡು ಕನ್ನಗೆರೆ ಗ್ರಾಮಕ್ಕೆ ಓಡಿ ಬಂದಿದೆ.

ಮೃತಪಟ್ಟ ಮೂರು ಜಾನುವಾರುಗಳಲ್ಲಿ  ಒಂದು ಹಸುವನ್ನು ಭಾಗಶಃ ತಿಂದಿದೆ. ಮೃತಪಟ್ಟ ಗರ್ಭಿಣಿ ಹಸುವಿನ ಹೊಟ್ಟೆಯಿಂದ ಕರುವನ್ನು ಹೊರ ಹಾಕಿ ತಿಂದಿರುವ ಭಯಾನಕ ದೃಶ್ಯ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಈ ಭಾಗದಲ್ಲಿ ಕಳೆದ ಕೆಲವು ದಿವಸಗಳಿಂದ ಎರಡು ಹುಲಿಗಳು ಸಂಚರಿಸುತ್ತಿದ್ದು, ಜಾನುವಾರುಗಳ ಮೇಲೆ ದಾಳಿಗಳು ನಡೆಯುತ್ತಿದೆ. ಮಾನವರ ಮೇಲೆ ದಾಳಿ ನಡೆಸಿ  ಅಮಾಯಕರನ್ನು ಬಲಿ ಪಡೆಯುವ ಮುನ್ನ ಹುಲಿಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಅಗ್ರಹಿಸಿದ್ದಾರೆ.

Tiger attack

ಉಪವಲಯ ಅರಣ್ಯ ಅಧಿಕಾರಿ ಉಮೇಶ್, ಅರಣ್ಯ ರಕ್ಷಕ ಮೋಹಸೀನ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version