4:58 AM Wednesday 15 - October 2025

ತಿಲಕ, ಬಿಂದಿ, ನಾಮ ಧರಿಸಿ ಬರುವ ವಿದ್ಯಾರ್ಥಿಗಳನ್ನು ತಡೆದರೆ ಕಠಿಣ ಕ್ರಮ | ಸಚಿವ ನಾಗೇಶ್ ಎಚ್ಚರಿಕೆ

b c nagesh
19/02/2022

ಬೆಂಗಳೂರು: ಧಾರ್ಮಿಕ ಸಂಕೇತಗಳನ್ನು ಶಾಲಾ ಕಾಲೇಜುಗಳಲ್ಲಿ ಬಳಸ ಬಾರದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಹಲವು ಗೊಂದಲಗಳು ಸೃಷ್ಟಿಯಾಗಿದ್ದು, ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಗುರುತುಗಳಾಗಿರುವ ಸಿಂಧೂರ, ತಿಲಕಗಳನ್ನೂ ಬಳಸಬಾರದು ಎನ್ನುವ ಒತ್ತಾಯ ಕೇಳಿ ಬಂದಿದೆ.

ಕಾಲೇಜೊಂದರಲ್ಲಿ ತಿಲಕ ಇಟ್ಟು ಆಗಮಿಸಿದ್ದ ವಿದ್ಯಾರ್ಥಿಯನ್ನು ತಡೆದ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಶಾಲಾ ಕಾಲೇಜುಗಳಲ್ಲಿ ತಿಲಕ,  ಸಿಂಧೂರಕ್ಕೆ ವಿರೋಧ ವ್ಯಕ್ತವಾಗಿದೆ.

ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಿಂಧೂರು, ತಿಲಕ, ಬಿಂದಿ ಧರಿಸಿದ ವಿದ್ಯಾರ್ಥಿಗಳನ್ನು ತರಗತಿಗೆ ಹಾಜರಾಗದಂತೆ ತಡೆಯುವಂತಿಲ್ಲ. ಸಿಂಧು, ತಿಲಕ, ಬಿಂದಿ, ನಾಮ, ಬಳೆ ಶೃಂಗಾರ ವಸ್ತುಗಳು. ವಿದ್ಯಾರ್ಥಿಗಳನ್ನು ತರಗತಿ ಹೊರಗೆ ನಿಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಿಂಧೂರ, ತಿಲಕ ಧರಿಸಿ ಬಂದ ವಿದ್ಯಾರ್ಥಿಗಳನ್ನು ತಡೆದ ಶಾಲಾ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಸಿಂಧೂರ, ತಿಲಕ, ನಾಮ, ಬಳೆಗಳು ದೇಶದ ಸಂಸ್ಕೃತಿ. ಈಗ ಸಮವಸ್ತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಅಲಂಕಾರಿಕ ವಸ್ತುಗಳ ಬಗ್ಗೆ ಮಾತನಾಡಿದ್ರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳನ್ನು ಬಳಸಬಾರದು ಎನ್ನುವ ಆದೇಶವಿದ್ದರೂ, ಕೇವಲ ಮುಸ್ಲಿಮ್ ವಿದ್ಯಾರ್ಥಿನಿಯರು ಬಳಸುವ ಹಿಜಾಬ್ ಗೆ ಮಾತ್ರವೇ ವಿರೋಧ ವ್ಯಕ್ತಪಡಿಸಿ, ಹಿಂದೂ ಧರ್ಮದ ಧಾರ್ಮಿಕ ಸಂಕೇತಗಳಾಗಿರುವ ಕುಂಕುಮ, ಬಿಂದಿಯನ್ನು ಕೇವಲ ಅಲಂಕಾರಿಕಾ ವಸ್ತುಗಳು ಎಂದು ಸಚಿವರೇ ಬಿಂಬಿಸುತ್ತಿದ್ದಾರೆ. ಇದಯ ಕೋರ್ಟ್ ಆದೇಶಕ್ಕೆ ವಿರುದ್ಧವಲ್ಲವೇ? ನ್ಯಾಯ ಅನ್ನೋದು ಎಲ್ಲರಿಗೂ ಒಂದೇ ಅಲ್ಲವೇ?  ಶಾಲಾ ಕಾಲೇಜುಗಳು ಕೋರ್ಟ್ ಆದೇಶವನ್ನು ಪಾಲಿಸಲು ಸ್ವತಃ ಶಿಕ್ಷಣ ಸಚಿವರೇ ಅಡ್ಡಿಪಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಇದೀಗ ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸೆಲ್ಫಿಗೆ ಬೇಡಿಕೆ ಇಟ್ಟ ಅಭಿಮಾನಿಗೆ ಥಳಿತ: ನಟ ಧನ್ವೀರ್ ವಿರುದ್ಧ ಎಫ್ ಐ ಆರ್

ಹಿಜಾಬ್ ಪರ ಪ್ರತಿಭಟನೆ: 58 ವಿದ್ಯಾರ್ಥಿನಿಯರ ಅಮಾನತು

ಸೌದೆ ತರಲು ಹೋಗಿದ್ದ ಕುರಿಗಾಹಿ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ?

ಗಾಂಜಾ ಸೇದಲು ಪ್ರೇರಣೆ ನೀಡಿದ್ರಾ ಪುನೀತ್ ಕೆರೆಹಳ್ಳಿ?

ಯೇಸುವಿನ ಪ್ರತಿಮೆ ಧ್ವಂಸ: ಕ್ರಿಶ್ಚಿಯನ್ನರ ಮೇಲಿನ ದಾಳಿಗೆ ಉದಾಹರಣೆ: ಕ್ಯಾಥೋಲಿಕ್ ಬಿಷಪ್ ಗಳಿಂದ ಬೇಸರ

ಇತ್ತೀಚಿನ ಸುದ್ದಿ

Exit mobile version