12:56 PM Tuesday 28 - October 2025

ತ್ರಿಶೂಲದಿಂದ ಕುತ್ತಿಗೆಗೆ ಚುಚ್ಚಿಕೊಂಡ!: ಜೀವ ಉಳಿಸಿಕೊಳ್ಳಲು 65 ಕಿ.ಮೀ. ದೂರದ ಆಸ್ಪತ್ರೆಗೆ ಪ್ರಯಾಣಿಸಿದ

bhaskar ram
30/11/2022

ಕೋಲ್ಕತ್ತಾ: ವ್ಯಕ್ತಿಯೋರ್ವ ತನಗೆ ತಾನೇ ತ್ರಿಶೂಲದಿಂದ ಚುಚ್ಚಿಕೊಂಡು, ಬಳಿಕ ಜೀವ ಉಳಿಸಿಕೊಳ್ಳಲು 65 ಕಿ.ಮೀ.ದೂರದ ಆಸ್ಪತ್ರೆಗೆ ಪ್ರಯಾಣಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದ್ದು, ವ್ಯಕ್ತಿಯ ಹುಚ್ಚಾಟ ಕಂಡು ಆಸ್ಪತ್ರೆ ಸಿಬ್ಬಂದಿ ಅಚ್ಚರಿಗೀಡಾಗಿದ್ದಾರೆ.

ಪಶ್ಚಿಮ ಬಂಗಾಳದ ನಾಡಿಯಾ ಪ್ರದೇಶದ ಭಾಸ್ಕರ್ ರಾಮ್ ಎಂಬ ವ್ಯಕ್ತಿಯೇ ಹುಚ್ಚಾಟ ಮೆರೆದವರಾಗಿದ್ದು, ಮನೆಯಲ್ಲಿ ಜಗಳವಾಡಿದ ಆಕ್ರೋಶದಲ್ಲಿ ತನ್ನ ಮನೆಯಲ್ಲಿದ್ದ ಸುಮಾರು 150 ವರ್ಷಗಳ ಹಳೆಯ ತ್ರಿಶೂಲದಿಂದ ತನ್ನ ಕುತ್ತಿಗೆಗೆ ತಾನೇ ಚುಚ್ಚಿಕೊಂಡಿದ್ದಾನೆ. ಈತ ತ್ರಿಶೂಲದಿಂದ ಚುಚ್ಚಿಕೊಂಡಿರುವುದನ್ನು ಕಂಡ ಆತನ ಸಹೋದರಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.

ತ್ರಿಶೂಲದಿಂದ ಚುಚ್ಚಿಕೊಂಡ ಬಳಿಕ ಜೀವದ ಆಸೆ ಬಂದಿದ್ದು, ತಕ್ಷಣವೇ ಅಲ್ಲಿಂದ 65 ಕಿ.ಮೀ. ದೂರದ ಆಸ್ಪತ್ರೆಗೆ ಪ್ರಯಾಣಿಸಿದ್ದ ಸುಮಾರು 3 ಗಂಟೆಯ ವೇಳೆಗೆ ಇಲ್ಲಿನ ಎನ್.ಆರ್.ಎಸ್. ಆಸ್ಪತ್ರೆಗೆ ತಲುಪಿದ್ದಾನೆ.

ತ್ರಿಶೂಲದಿಂದ ಚುಚ್ಚಿಕೊಂಡರೂ ವ್ಯಕ್ತಿ ಯಾವುದೇ ನೋವಿಲ್ಲದಂತೆ ವರ್ತಿಸಿದ್ದಾನೆ ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಈತ ಚುಚ್ಚಿಕೊಂಡಿದ್ದ ತ್ರಿಶೂಲ ಒಂದೂವರೆ ಶತಮಾನಗಳ ಕಾಲ ಕುಟುಂಬಸ್ಥರು ಮನೆಯಲ್ಲಿ ಸಂರಕ್ಷಿಸಿದ್ದರು. ಮನೆಯಲ್ಲಿ ಈ ತ್ರಿಶೂಲವನ್ನು ಪೂಜಿಸಲಾಗುತ್ತಿತ್ತು ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ.

ಡಾ.ಅರ್ಪಿತಾ ಮಹಂತಿ, ಸುತೀರ್ಥ ಸಹಾ ಮತ್ತು ಡಾ.ಮಧುರಿಮಾ ಅವರು ಅಸೋಸಿಯೇಟ್ ಪ್ರೊಫೆಸರ್ ಡಾ.ಪ್ರಣಬಾಶಿಶ್ ಬ್ಯಾನರ್ಜಿ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ಈತನಿಗೆ ಚಿಕಿತ್ಸೆ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version