10:59 PM Wednesday 15 - October 2025

ತನ್ನ ಸೋಲಿಗೆ ಕಾರಣ ಯಾರು ಎಂದು ಬಯಲು ಮಾಡಿದ ಟ್ರಂಪ್!

10/11/2020

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೋಲಿಗೆ ಕಾರಣವನ್ನು ಹೇಳಿದ್ದು, ಇದೀಗ ಅವರ ಹೇಳಿಕೆ ತೀವ್ರವಾಗಿ ಚರ್ಚೆಗೀಡಾಗಿದೆ. ಚುನಾವಣಾ ಸೋಲನ್ನು ಸಮರ್ಥಿಸಲು ಅವರು  ಕೊರೊನಾ ಲಸಿಕೆಯ ಮೇಲೆ ದೂರು ಹಾಕಿದ್ದಾರೆ.

ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮತ್ತು ಫಿಜರ್ ಉದ್ದೇಶ ಪೂರ್ವಕವಾಗಿಯೇ ಕೊರೊನಾ ಲಸಿಕೆ ಪೂರೈಕೆಯನ್ನು ವಿಳಂಬ ಮಾಡಿ ತನ್ನ ಸೋಲಿಗೆ ಕಾರಣವಾದವು ಎಂದು ಔಷಧಿ ತಯಾರಕ ಕಂಪೆನಿಗಳ ಮೇಲೆ ಅವರು ಕಿಡಿಕಾರಿದ್ದಾರೆ.

ತನ್ನ ಸೋಲಿಗಾಗಿಯೇ ಕಂಪೆನಿಗಳು ಕೊರೊನಾ ಲಸಿಕೆಯನ್ನು ವಿಳಂಬ ಮಾಡಿವೆ ಎಂದು ತನ್ನ ಸೋಲಿನ ಹೊಣೆಯನ್ನು ಔಷಧಿ ಕಂಪೆನಿಗಳು ಹೊರುವಂತೆ ಮಾಡಿದ್ದಾರೆ.  ಅಮೆರಿಕ ಹಾಗೂ ಜರ್ಮನಿಯ ಕಂಪೆನಿಗಳು ಸೇರಿ  ಕೊವಿಡ್ 19 ಮೂರನೇ ಹಂತದ ಲಸಿಕೆ ತಯಾರಿಕೆ ನಡೆಸುತ್ತಿವೆ. ಈಗಾಗಲೇ 90 ಭಾಗ ಇದು ಪೂರ್ಣಗೊಂಡಿದೆ. ಇದೇ ಸಂದರ್ಭದಲ್ಲಿ ಟ್ರಂಪ್ ಅವರು ತನ್ನ ಸೋಲಿಗೆ ಕೊವಿಡ್ ಲಸಿಕೆ ವಿಳಂಬವೇ ಕಾರಣ ಎಂದು ಕಂಪೆನಿಗಳನ್ನು ಮೇಲೆ ಕಿಡಿಕಾರಿದ್ದಾರೆ.

ಇತ್ತೀಚಿನ ಸುದ್ದಿ

Exit mobile version