ಬಗೆಹರಿಯದ ಸಿಎಂ ಬಿಕ್ಕಟ್ಟು:30-30 ಪ್ಲ್ಯಾನ್ ಒಪ್ಪದ ಡಿಕೆಶಿ-ಸಿದ್ದರಾಮಯ್ಯ
ಬೆಂಗಳೂರು :ಬಹುಮತ ಪಡೆದ ಕಾಂಗ್ರೆಸ್ನಲ್ಲಿ ಸಿಎಂ ಆಯ್ಕೆ ಸರ್ಕಾರ ರಚನೆಯ ಗೊಂದಲ ಇನ್ನೂ ಬಗೆಹರಿದಂತೆ ಕಾಣುತ್ತಿಲ್ಲ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು,ಮುಖ್ಯಮಂತ್ರಿಗಾದಿಯನ್ನೇರುವ ಇಚ್ಛೆಯಿಂದ ಕೈಬಿಡುವಂತೆಯೂ ಇನ್ನು ಬೇರೆಯವರಿಗೆ ಬಿಟ್ಟುಕೊಡುವಂತೆಯೂ ಕಾಣುತ್ತಿಲ್ಲವಾದ್ದರಿಂದ ಈ ಬಿಕ್ಕಟ್ಟು ಎಐಸಿಸಿಗೆ ತಲೆನೋವಾಗಿ ಪರಿಣಮಿಸಿದಂತಿದೆ.
ಇದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಹೊಸ ಪ್ಲಾನ್ ರೂಪಿಸಿದ್ದು 30 ತಿಂಗಳ ಅವಧಿಗೆ ಇಬ್ಬರಿಗೂ ಸಿಎಂ ಸ್ಥಾನ ಹಂಚಲು ತೀರ್ಮಾನಿಸಿದೆನ್ನಲಾಗಿದೆ.
ಆದರೆ ಈ 30 ತಿಂಗಳ ಆಡಳಿತಕ್ಕೆ ಡಿ.ಕೆ ಶಿವಕುಮಾರ್ ಸುತಾರಾಂ ನೋ ಎಂದಿದ್ದಾರೆ ಎನ್ನಲಾಗಿದೆ. ನಾನು ಈ ಬಾರಿ ಕಷ್ಟಪಟ್ಟು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇನೆ. ಹೀಗಾಗಿ ನನಗೆ ಸಿಎಂ ಸ್ಥಾನ ಬೇಕೆಂದು ಹಠ ಸಾಧಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಸಿದ್ದರಾಮಯ್ಯ ಕೂಡ ಅಧಿಕಾರ ಹಂಚಿಕೆಗೆ ವಿರೋಧ ಸೂಚಿಸಿದ್ದು ಕಾಂಗ್ರೆಸ್ ಹೈಕಮಾಂಡ್ಗೆ ತಲೆನೋವು ಬಗೆಹರಿಯುವ ಯಾವ ಸೂಚನೆ ಸಿಗುತ್ತಿಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























