ಶಾಕಿಂಗ್ ನ್ಯೂಸ್: ಅಪರಿಚಿತ ತಂಡದಿಂದ ಬೀಡಿ ಬ್ರ್ಯಾಂಚ್ ಗೆ ಹೋಗುತ್ತಿದ್ದ ಬಾಲಕನ ಅಪಹರಣಕ್ಕೆ ಯತ್ನ

kidnep
29/09/2021

ಉಪ್ಪಿನಂಗಡಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಲು ಯತ್ನಿಸಿದ ಘಟನೆ ಉಪ್ಪಿನಂಗಡಿ ಬಳಿ ಮಠ ಹಿರ್ತಡ್ಕ ಎಂಬಲ್ಲಿ ನಡೆದಿದ್ದು, ಅದೃಷ್ಟವಶಾತ್ ಬಾಲಕ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾನೆ.

14 ವರ್ಷ ವಯಸ್ಸಿನ ಬಾಲಕ ಸಿಫಾನ್ ಇಲ್ಲಿನ ಜನತಾ ಕಾಲನಿ ನಿವಾಸಿಯಾಗಿದ್ದು, ಬೀಡಿ ಕೊಡಲೆಂದು ಬೀಡಿ ಬ್ರಾಂಚ್ ಗೆ ತೆರಳಿದ್ದು, ಈ ವೇಳೆ ಬೆಂಗಳೂರು ಕಡೆಗೆ ತೆರಳುತ್ತಿದ್ದ ಓಮ್ನಿ ಕಾರು ಈತ ಹಿಂದೆ ಬಂದು ನಿಂತಿದ್ದು, ಅದರಿಂದ ಇಳಿದ ಅಪರಿಚಿತರು ಬಾಲಕನನ್ನು ಕಾರಿನೊಳಗೆ ಎಳೆದು ಹಾಕಲು ಯತ್ನಿಸಿದ್ದಾರೆನ್ನಲಾಗಿದೆ.

ಈ ವೇಳೆ ಬಾಲಕ ಅವರ ಹಿಡಿತದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎಂದು ಹೇಳಲಾಗಿದ್ದು, ಈ ವೇಳೆ ಓಮ್ನಿಯಲ್ಲಿದ್ದವರು ಕೂಡ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಇನ್ನಷ್ಟೇ ದೂರು ದಾಖಲಾಗಬೇಕಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

 

ಇನ್ನಷ್ಟು ಸುದ್ದಿಗಳು…

ಅತ್ಯಾಚಾರದಿಂದ ಬಾಲಕಿ ಗರ್ಭಿಣಿ: ತಂದೆಗೆ ವಿಷಯ ಹೇಳುತ್ತೇನೆ ಎಂದಿದ್ದಕ್ಕೆ ಯುವಕನಿಂದ ಘೋರ ಕೃತ್ಯ

ಕೃಷ್ಣನ ಚಕ್ರ, ಟಿಪ್ಪುವಿನ ಸಿಂಹಾಸನ ಮಾರಾಟ ಮಾಡಿದ ಆರೋಪಿ ಅರೆಸ್ಟ್!

ಹೃದಯಾಘಾತವಾಗುವುದಕ್ಕೂ ಮೊದಲು ಕಂಡು ಬರುವ ಲಕ್ಷಣಗಳೇನು?

ಚಿಕ್ಕಮಗಳೂರು: ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳನ್ನು ತಡೆದು ಸಂಘಪರಿವಾರದ ಸದಸ್ಯರಿಂದ ಹಲ್ಲೆ

ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಅನೈತಿಕ ಗೂಂಡಾಗಿರಿ: ಕಠಿಣ ಕಾನೂನು ಕ್ರಮಕ್ಕೆ ಡಿವೈಎಫ್ ಐ ಒತ್ತಾಯ

ಗೋಶಾಲೆ ನಿರ್ಮಾಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ಎಕರೆ ಪ್ರದೇಶಕ್ಕೆ ಗುರುತು | ಸಚಿವ ಎಸ್.ಅಂಗಾರ

ಕಡಬ: ಕಾನ್ ಸ್ಟೇಬಲ್ ನಿಂದ ಅತ್ಯಾಚಾರ ಪ್ರಕರಣ | ಇಂದು ನಡೆದ ಬೆಳವಣಿಗೆಗಳೇನು?

ಮಂಗಳೂರು: ಬೇರೆ ಬೇರೆ ಧರ್ಮದ ವಿದ್ಯಾರ್ಥಿಗಳು ಜೊತೆಯಾಗಿ ಪ್ರಯಾಣಿಸುತ್ತಿದ್ದ ಕಾರಿಗೆ ದಾಳಿ: ಐವರು ಕಿಡಿಗೇಡಿಗಳ ಬಂಧನ

ಇತ್ತೀಚಿನ ಸುದ್ದಿ

Exit mobile version