ಅರ್ಜುನನ ಕೊನೆಯ ಹೋರಾಟದ ವಿಡಿಯೋ ವೈರಲ್: ಇಲ್ಲಿದೆ ಆ ವಿಡಿಯೋ

ಹಾಸನ: ದಸರಾ ಆನೆ ಕ್ಯಾಪ್ಟನ್ ಅರ್ಜುನ ಕಾಡಾನೆಯ ಜೊತೆಗೆ ನಡೆಸಿದ ಹೋರಾಟದಲ್ಲಿ ವೀರ ಮರಣ ಪಡೆದು ಇಂದಿಗೆ 57 ದಿನಗಳು ಕಳೆದಿವೆ. ಇಂದಿಗೂ ಕರ್ನಾಟಕದ ಜನತೆಗೆ ಅರ್ಜುನನ ಹೆಸರು ಕೇಳಿದಾಗಲೇ ಅವನ ಸಾವಿನ ನೋವು ಕಾಡುತ್ತದೆ. ಇದೀಗ ಅರ್ಜುನ ಕಾಡಾನೆಯ ಜೊತೆಗೆ ವೀರಾವೇಷದೊಂದಿಗೆ ಹೋರಾಡುತ್ತಿರುವ ಕೊನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಇಟಿಎಫ್ ಸಿಬ್ಬಂದಿ ಪ್ರವೀಣ್ ಅವರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಕಾಡಾನೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.
ಬಲಿಷ್ಠ ಕಾಡಾನೆಯ ದಾಳಿಯಿಂದ ರಕ್ತ ಸುರಿಯುತ್ತಿದ್ದರೂ ಅರ್ಜುನ ಬಿಡದೇ ಕಾದಾಡುತ್ತಿರುವ ದೃಶ್ಯ ಮರುಕ ಹುಟ್ಟಿಸುತ್ತಿದೆ. ಮದವೇರಿದ ಬಲಿಷ್ಠ ಆನೆಯನ್ನು ಅರ್ಜುನ ಹಿಮ್ಮೆಟ್ಟಿಸುತ್ತಿದ್ದಾನೆ. ಅಷ್ಟು ಹೊತ್ತಿನಿಂದ ಅರ್ಜುನ ಕಾಡಾನೆ ಜೊತೆಗೆ ಹೋರಾಡಿದರೂ ಎದುರಾಳಿ ಕಾಡಾನೆಗೆ ಅರವಳಿಕೆ ಮದ್ದು ನೀಡಲು ವೈದ್ಯರು ವಿಫಲರಾದರೆ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಅರ್ಜುನ ಸಾವಿಗೀಡಾಗಿ 57 ದಿನಗಳ ಕಳೆದರೂ ಅವನ ಸಾವಿಗೆ ಯಾರ ನಿರ್ಲಕ್ಷ್ಯ ಕಾರಣ, ಯಾರು ಜವಾಬ್ದಾರಿ ಅನ್ನೋದೇ ತಿಳಿಯದಂತಾಗಿದೆ. ತನ್ನ ಜೀವನದುದ್ದಕ್ಕೂ ಸರ್ಕಾರಕ್ಕೆ, ನಾಗರಿಕ ಸಮಾಜಕ್ಕೆ ಸೇವೆ ಸಲ್ಲಿಸಿದ ಅರ್ಜುನನ ಪ್ರಾಣಕ್ಕೆ ಬೆಲೆ ಇಲ್ಲದಂತಾಯಿತೇ? ಸರ್ಕಾರ, ಅರಣ್ಯ ಇಲಾಖೆಗೆ, ನಾಗರಿಕ ಸಮಾಜಕ್ಕೆ ಜೀತದ ಆಳಿನಂತೆ ದುಡಿದ ಅರ್ಜುನ ಈ ರೀತಿ ಸಾಯುವಂತಾಗಿರೋದು ನ್ಯಾಯವೇ? ಎನ್ನುವ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಿದೆ.
ಕ್ಯಾಪ್ಟನ್ ಅರ್ಜುನ ವೀರ ಮರಣವನ್ನು ಹೊಂದಿ ಇಂದಿಗೆ 57 ದಿನಗಳು ಕಳೆದಿವೆ. ಅಂಬಾರಿ ಹೊತ್ತಿದ್ದ ಅರ್ಜುನ ಕಾಡಾನೆ ವಿರುದ್ಧ ಹೋರಾಡುವ ಕೊನೆಯ ವಿಡಿಯೋ ಇದಾಗಿದ್ದು, ಈ ವಿಡಿಯೋವನ್ನು ಇಟಿಎಫ್ ಸಿಬ್ಬಂದಿ ಪ್ರವೀಣ್ ಚಿತ್ರೀಕರಿಸಿದ್ದಾರೆ.#Arjana #elephant #sakleshpura #hassan pic.twitter.com/acJK9Aba93
— Harshith Achrappady (@HAchrappady) January 30, 2024