ಬಿಪಿಎಲ್ ಕಾರ್ಡ್ ಹೊಂದಿರುವವರ ವಿದ್ಯುತ್ ಬಿಲ್ ಮನ್ನಾ ಸುದ್ದಿಯ ಸತ್ಯಾಂಶ ಏನು?
14/06/2021
ದಕ್ಷಿಣ ಕನ್ನಡ: ಬಿಪಿಎಲ್ ಕಾರ್ಡ್ ದಾರರಿಗೆ ವಿದ್ಯುತ್ ಬಿಲ್ ಮನ್ನಾವಾಗುತ್ತದೆ ಎಂದು ಮೆಸ್ಕಾಂ ಹೇಳಿರುವ ಬಗ್ಗೆ ಪ್ರಕಟಣೆ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ, ಈ ಪತ್ರ ಸುಳ್ಳು ಎಂದು ತಿಳಿದು ಬಂದಿದೆ.
ಬಿಪಿಎಲ್ ಕಾರ್ಡ್ ಇದ್ದವರಿಗೆ ವಿದ್ಯುತ್ ಬಿಲ್ ಮನ್ನಾ ಬಗ್ಗೆ ಇಲ್ಲಿಯವರೆಗೆ ಸರ್ಕಾರ ಯಾವುದೇ ಆದೇಶವನ್ನು ನೀಡಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದೆ. ಹೀಗಾಗಿ ಯಾರು ಕೂಡ ಕೆಇಬಿಗೆ ಅನಗತ್ಯವಾಗಿ ಬರುವುದು ಬೇಡ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಈ ರೀತಿಯ ಸುಳ್ಳು ಸುದ್ದಿಗೆ ಸಾರ್ವಜನಿಕರು ಕಿವಿಕೊಡುವುದು ಬೇಡ ಎಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಕೊವಿಡ್ ನಡುವೆ ಸರ್ಕಾರ ಪರಿಹಾರಗಳನ್ನು ಘೋಷಿಸುತ್ತಿರುವ ನಡುವೆಯೇ ದಕ್ಷಿಣ ಕನ್ನಡದಾದ್ಯಂತ ಇಂತಹದ್ದೊಂದು ವದಂತಿಯನ್ನು ಹರಡಲಾಗಿದೆ. ಇದನ್ನು ಜನರು ಕೂಡ ನಂಬಿದ್ದರು. ಇದೀಗ ಇದು ಸುಳ್ಳು ಸುದ್ದಿ ಎಂದು ತಿಳಿಯುತ್ತಿದ್ದಂತೆಯೇ ನಿರಾಶರಾಗಿದ್ದಾರೆ.

























