6:59 PM Wednesday 15 - October 2025

ವಿಮಾನದಿಂದ ಬಿದ್ದ ಅಫ್ಘಾನ್ ನ ಇಬ್ಬರು ನಾಗರಿಕರ ಸಾವು ಎಷ್ಟೊಂದು ಭೀಕರವಾಗಿತ್ತು ಗೊತ್ತೆ? | ಸಾವನ್ನು ಕಣ್ಣಾರೆ ಕಂಡವರು ಹೇಳಿದ್ದೇನು?

afghanistan
19/08/2021

ಕಾಬೂಲ್:  ತಾಲಿಬಾನಿಗಳು ಕಾಬುಲ್ ಪ್ರವೇಶಿಸುತ್ತಿದ್ದಂತೆಯೇ, ದೇಶ ತೊರೆಯಲು ವಿಮಾನದ ಟಯರ್ ಬಳಿ ನೇತಾಡುತ್ತಾ ಹೊರಟಿದ್ದವರು. ಎತ್ತರದಿಂದ ಬೀಳುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಇಂದು ಅವರು ಯಾವ ಪ್ರದೇಶಕ್ಕೆ ಬಿದ್ದಿದ್ದಾರೆ ಮತ್ತು ಅವರ ಮರಣ ಎಷ್ಟೊಂದು ಭೀಕರವಾಗಿತ್ತು ಎನ್ನುವುದು ಇದೀಗ ಬಯಲಾಗಿದೆ.

ವಿಮಾನದಿಂದ ಬಿದ್ದವರು ನೇರವಾಗಿ ವಲಿ ಸಲೇಕ್ ಎಂಬವರ ಎರಡು ಅಂತಸ್ತಿನ ಮನೆಯ ಛಾವಣಿಗೆ ಬಿದ್ದಿದ್ದಾರೆ. ಕಾಬೂಲ್ ನ ಖೈರ್ ಖಾನಾ ಪ್ರದೇಶದಲ್ಲಿ ವಲಿ ಸಲೆಕ್ ಮಧ್ಯಾಹ್ನದ ವೇಳೆ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಮನೆಯ ಮೇಲಿನಿಂದ ಭಾರೀ ಶಬ್ದ ಕೇಳಿ ಬಂದಿದ್ದು, ಯಾರೋ ಬಾಂಬ್ ಸ್ಟೋಟಿಸಿರಬಹುದು ಎಂದು ಅವರು ಭೀತರಾಗಿದ್ದರು.

ಭಾರೀ ಸದ್ದನ್ನು ಕೇಳಿ ನೆರೆ ಹೊರೆಯವರು ಕೂಡ ಓಡಿ ಬಂದಿದ್ದರು. ಈ ವೇಳೆ ಸಲೆಕ್ ಅವರು ಮನೆಯ ಛಾವಣಿಗೆ ಹೋಗಿ ನೋಡಿದ್ದು, ಈ ವೇಳೆ ಬೆಚ್ಚಿ ಬೀಳಿಸುವ ದೃಶ್ಯ ಅಲ್ಲಿ ಕಾದಿತ್ತು. ವಿಮಾನದಿಂದ ಬಿದ್ದಿದ್ದವರ ದೇಹ ಛಿದ್ರ ಛಿದ್ರವಾಗಿತ್ತು.

ಸಲೆಕ್ ಅವರು ಹೇಳುವಂತೆ, ಎರಡೂ ದೇಹಗಳು ಸಂಪೂರ್ಣವಾಗಿ ಹಾನಿಗೊಳಗಾಗಿತ್ತು. ದೇಹದಿಂದ ವಿಪರೀತವಾಗಿ ರಕ್ತ ಸ್ರಾವವಾಗಿತ್ತು. ಹೊಟ್ಟೆ ಮತ್ತು ತಲೆ ತೆರೆದುಕೊಂಡು ಮೆದುಳು ಹಾಗೂ ಕರುಳು ಹೊರ ಬಂದಿದ್ದವು. ಮೊದಲಿಗೆ ಇವರು ವಿಮಾನದಿಂದ ಎಸೆಯಲ್ಪಟ್ಟಿರುವ ತಾಲಿಬಾನಿಗಳು ಎಂದು ಅವರು ಅಂದು ಕೊಂಡಿದ್ದರಂತೆ.

ಮೃತಪಟ್ಟ ಇಬ್ಬರ ಗುರುತಿನ ಚೀಟಿಯ ಪ್ರಕಾರ ಅವರ ಹೆಸರು ಫಿದಾ ಮೊಹಮ್ಮದ್ ಮತ್ತು ಶಫೀವುಲ್ಲಾ ಎಂದು ಗುರುತಿಸಲಾಯಿತು. ಬಳಿಕ ಇಬ್ಬರ ಮೃತದೇಹಗಳನ್ನು ಈ ಪ್ರದೇಶದಿಂದ 300 ಮೀಟರ್ ದೂರವಿದ್ದ ಮಸೀದಿಗೆ ಕೊಂಡೊಯ್ದು ಕುಟುಂಬಸ್ಥರನ್ನು ಸಂಪರ್ಕಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ಬಿಜೆಪಿಯ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕಳ್ಳರ ಕಾಟ | ಕಾರ್ಯಕರ್ತರ ಜೇಬಿಗೆ ಕತ್ತರಿ

ಅಫ್ಘಾನ್ ನಲ್ಲಿ ತಾಲಿಬಾನಿಗಳ ವಿಜಯ: ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು | ತಜ್ಞರ ಎಚ್ಚರಿಕೆ

ವಧುವರರಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ಕೊಟ್ಟು ಹಾಸ್ಯನಟ ನೀಡಿದ ಸಲಹೆ ಏನು ಗೊತ್ತಾ?

ರೈತ ಹೋರಾಟಗಾರರ ಬಗ್ಗೆ ಹಗುರವಾಗಿ ನಾಲಿಗೆ ಹರಿಬಿಟ್ಟ ಶೋಭಾ ಕರಂದ್ಲಾಜೆ ಜಿಲ್ಲೆಗೆ ಕಳಂಕ: ಕ್ಯಾಂಪಸ್ ಫ್ರಂಟ್

ಧ್ವಜಾರೋಹಣದ ವೇಳೆ ರಾಷ್ಟ್ರಗೀತೆ ಮರೆತ ಸಂಸದ, ಕೊನೆಗೆ ಮಾಡಿದ್ದೇನು? | ವಿಡಿಯೋ ವೈರಲ್

ಸಾರ್ವರ್ಕರ್ ಗಲಾಟೆ: ಎಸ್ ಡಿಪಿಐ ಮತ್ತು ಬಿಜೆಪಿಯ ಒಳ ಒಪ್ಪಂದದ ಕಾರ್ಯಕ್ರಮ | ಹಿಂದೂ ಮಹಾಸಭಾ ಆಕ್ರೋಶ

ಇತ್ತೀಚಿನ ಸುದ್ದಿ

Exit mobile version