12:14 AM Wednesday 15 - October 2025

ಬೇಕಿದ್ರೆ, ವಿಷ ಕುಡಿತೀನಿ, ಕೊವಿಡ್ ಸೆಂಟರ್ ಗೆ ಬರಲ್ಲ | ಸೋಂಕಿತನ ಹಠಕ್ಕೆ ಸಿಬ್ಬಂದಿ ಸುಸ್ತು

covid 19
16/06/2021

ದಾವಣಗೆರೆ: “ಬೇಕಿದ್ರೆ, ವಿಷ ಕುಡಿತೀನಿ, ಆದ್ರೆ… ಕೊವಿಡ್ ಸೆಂಟರ್ ಗೆ ನಾನು ಬರಲ್ಲ” ಎಂದು ಕೊವಿಡ್ ಸೋಂಕಿತನೋರ್ವ ಹಠ ಹಿಡಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬಾನುವಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊವಿಡ್ ಸೋಂಕು ಕಾಣಿಸಿಕೊಂಡರೆ ಕಡ್ಡಾಯವಾಗಿ ಕೊವಿಡ್ ಸೆಂಟರ್ ಗೆ ರೋಗಿಗಳನ್ನು ಕಳುಹಿಸಬೇಕು ಎಂದು ಜಿಲ್ಲಾಧಿಕಾರಿಗಳ ಆದೇಶ ಇರುವ ಹಿನ್ನೆಲೆಯಲ್ಲಿ,  ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್  ಸಿಬ್ಬಂದಿ, ಕೊವಿಡ್ ಸೋಂಕಿತನನ್ನು ಸೆಂಟರ್ ಗೆ ಸೇರಿಸಲು  ಮುಂದಾಗಿದ್ದಾರೆ.

ಈ ವೇಳೆ ಕೊವಿಡ್ ಸೋಂಕಿತ ವಿಷ ಬಾಟಲಿ ಹಿಡಿದುಕೊಂಡು,  ಬೇಕಿದ್ದರೆ ನನಗೆ ವಿಷ ಕೊಡಿ, ಆದ್ರೆ ನಾನು ಕೊವಿಡ್ ಸೆಂಟರ್ ಗೆ ಬರುವುದಿಲ್ಲ. ನೀವೇನಾದ್ರೂ ಕೊವಿಡ್ ಕೇರ್ ಸೆಂಟರ್ ಗೆ ಕರೆದೊಯ್ದರೆ ನಾನೇ ವಿಷ ಕುಡಿದು ಸತ್ತು ಹೋಗುತ್ತೇನೆ ಎಂದು ಅಧಿಕಾರಿಗಳನ್ನು ಬೆದರಿಸಿದ್ದಾನೆ.

ಎಷ್ಟು ಪ್ರಯತ್ನಿಸಿದರೂ ಆ ವ್ಯಕ್ತಿಯನ್ನು ಕೊವಿಡ್ ಕೇರ್ ಸೆಂಟರ್ ಗೆ  ದಾಖಲಿಸಲು ಸಾಧ್ಯವೇ ಆಗಿಲ್ಲ.  ಈ ಮನೆಯಲ್ಲಿ ಐದು ಜನರಿದ್ದಾರೆ ಎಂದು ಹೇಳಲಾಗಿದೆ. ಈ ಐದು ಜನರಿಗೂ ಕೊವಿಡ್ ಪಾಸಿಟಿವ್ ಇರುವ ಶಂಕೆ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ

Exit mobile version