6:10 PM Wednesday 15 - October 2025

ವಿಶಾಲ ಗಾಣಿಗ ಹತ್ಯೆಗೆ ಸ್ಫೋಟಕ ತಿರುವು: ಸುಪಾರಿ ಕಿಲ್ಲರ್ಸ್ ನ್ನು ಬಿಟ್ಟು ಪತ್ನಿಯನ್ನೇ ಕೊಂದ ಪತಿ

vishala
20/07/2021

ಬ್ರಹ್ಮಾವರ:  ಬ್ರಹ್ಮಾವರ ತಾಲೂಕಿನ ಉಪ್ಪಿನ ಕೋಟೆ ಸಮೀಪದ ಮಿಲನ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನಲ್ಲಿ  ವಿಶಾಲ ಗಾಣಿಗ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶಾಲ ಗಾಣಿಗ ಪತಿಇ ರಾಮಕೃಷ್ಣ ಗಾಣಿಗ ಸೇರಿದಂತೆ ಓರ್ವ ಸುಪಾರಿ ಕಿಲ್ಲರ್ ನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಬಂಧನಕ್ಕೊಳಗಾಗಿದ್ದ ಪತಿ ರಾಮಕೃಷ್ಣ ಗಾಣಿಗನನ್ನು  ಪ್ರಕರಣದ ತನಿಖಾಧಿಕಾರಿ ಅನಂತಪದ್ಮನಾಭ ಅವರು ಮಂಗಳವಾರ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ  ನಾಲ್ಕು ದಿನಗಳ ವರೆಗೆ ಪೊಲೀಸ್ ಕಸ್ಟಡಿಗೆ  ಒಪ್ಪಿಸಿದೆ.

ವಿಶಾಲ ಗಾಣಿಗ ಅವರನ್ನು ಇಬ್ಬರು ಸುಪಾರಿ ಕಿಲ್ಲರ್ ಗಳು ಹತ್ಯೆ ಮಾಡಿದ್ದಾರೆನ್ನಲಾಗಿದೆ.  ಈ ಪೈಕಿ ಓರ್ವನನ್ನು ಉತ್ತರ ಪ್ರದೇಶದಿಂದ ಬಂಧಿಸಿ ಪೊಲೀಸರು ಉಡುಪಿಗೆ ಕರೆತರುತ್ತಿದ್ದಾರೆ. ಇನ್ನೋರ್ವನಿಗಾಗಿ ಶೋಧ ನಡೆಯುತ್ತಿದೆ.

vishala ganiga

ವಿಶಾಲ ಗಾಣಿಗ, ರಾಮಕೃಷ್ಣ ಗಾಣಿಗ

ಘಟನೆಯ ವಿವರ:

ದುಬೈನಲ್ಲಿ ಪತಿಯ ಜೊತೆಗೆ ನೆಲೆಸಿದ್ದ ವಿಶಾಲ ಗಾಣಿಗ ತಮ್ಮ ಕುಮ್ರಗೋಡುವಿನ ಫ್ಲಾಟ್ ಗೆ ಆಗಮಿಸಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳಿಗೆ ಅವರು ಸಹಿ ಹಾಕಬೇಕಾಗಿದ್ದರಿಂದಾಗಿ ಅವರು ದುಬೈನಿಂದ ಆಗಮಿಸಿದ್ದರು ಎನ್ನಲಾಗಿದೆ. ಹತ್ಯೆಯಾದ ದಿನ ತಮ್ಮ ಮಗಳನ್ನು ಕುಂದಾಪುರದ ಅಜ್ಜ- ಅಜ್ಜಿಯ ಮನೆಗೆ ಕಳುಹಿಸಿದ್ದ ವಿಶಾಲ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಬ್ಯಾಂಕ್ ನಲ್ಲಿ ಕೆಲಸ ಇದ್ದುದರಿಂದ ಆಟೋದಲ್ಲಿ  ಅವರು ಬ್ಯಾಂಕ್ ಗೆ ತೆರಳಿದ್ದರು. ಬ್ಯಾಂಕ್ ನ ಲಾಕರ್ ನಲ್ಲಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಅದೇ ಆಟೋದಲ್ಲಿ ಬಂದಿದ್ದರು. ಇದಾದ ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಬ್ಯಾಂಕ್ ಕೆಲಸ ಮುಗಿದ ಬಳಿಕ ಮಗಳನ್ನು ಕರೆದುಕೊಂಡು ಹೋಗುವುದಾಗಿ ವಿಶಾಲಾ ತನ್ನ ಕುಂದಾಪುರದಲ್ಲಿರುವ ತಂದೆ ತಾಯಿಗೆ ಹೇಳಿದ್ದರು. ಆದರೆ, ಅವರು ರಾತ್ರಿಯಾದರೂ ಬಾರದೇ ಇದ್ದಾಗ  ಕರೆ ಮಾಡಿದ್ದು, ಅವರು ರಿಸಿವ್ ಮಾಡದಿದ್ದಾಗ ಗಾಬರಿಯಿಂದ ದುಬೈನಲ್ಲಿರುವ ಅವರ ಪತಿಗೆ ವಿಚಾರ ತಿಳಿಸಿದ್ದಾರೆ. ಈ ವೇಳೆ ಪತಿ ರಾಮಕೃಷ್ಣ ಗಾಣಿಗ ಅವರು ಫ್ಲಾಟ್ ಗೆ ಹೋಗಿ ನೋಡಿ ಬನ್ನಿ ಎಂದು ಹೇಳಿದ್ದಾರೆ. ತಕ್ಷಣವೇ ಅಪಾರ್ಟ್ ಮೆಂಟ್ ಗೆ ಬಂದ ಅವರಿಗೆ ಬಾಗಿಲು ಲಾಕ್ ಮಾಡಿದ ಸ್ಥಿತಿ ಕಂಡು ಬಂದಿದ್ದು, ತಮ್ಮ ಕೀ ಬಳಸಿ ಅವರು ಮನೆಯೊಳಗೆ ಹೋಗಿ ನೋಡಿದಾಗ ವಿಶಾಲಾ ಅವರು ಹಾಲ್ ನಲ್ಲಿ ಹತ್ಯೆಗೀಡಾಗಿದ್ದು, ಬೆಡ್ ರೂಮ್ ಹಾಗೂ ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿತ್ತು. ಚಿನ್ನಾಭರಣಗಳು ನಾಪತ್ತೆಯಾಗಿದ್ದವು.

ಪತ್ನಿಯನ್ನು ಊರಿಗೆ ಕಳುಹಿಸಿದ್ದ ಪತಿ ರಾಮಕೃಷ್ಣ ಆಕೆಯ ಹತ್ಯೆಗೆ ಸುಪಾರಿ ಕಿಲ್ಲರ್ ಗಳನ್ನು ನೇಮಿಸಿದ್ದ ಎಂದು ಹೇಳಲಾಗಿದೆ. ತನ್ನ ಅಕ್ರಮ ಸಂಬಂಧ ಹಾಗೂ ಆಸ್ತಿ ವ್ಯವಹಾರಗಳ ಹಿನ್ನೆಲೆಯಲ್ಲಿ ಈ ಹತ್ಯೆ ನಡೆಸಿದ್ದಾನೆ ಎಂದು ಅನುಮಾನ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಸ್ನಾನ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ಚಿತ್ರೀಕರಣ: ಯುವತಿ ಕಿರುಚಿದಾಗ ಆರೋಪಿ ಪರಾರಿ

ಬಸ್ ನಿಲ್ದಾಣದಲ್ಲಿ ವೃದ್ಧೆಯ ಮೇಲೆ ಅತ್ಯಾಚಾರ, ಬರ್ಬರ ಹತ್ಯೆ

ನಳಿನ್ ಕುಮಾರ್ ಕಟೀಲ್ ಆಡಿಯೋ ಸೋರಿಕೆ ಮಾಡಿದ್ದು ಇವರಂತೆ!

ಅಶ್ಲೀಲ ಚಿತ್ರ ಪ್ರಸಾರ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್

“ಒಂದು ರೀತಿಯಲ್ಲಿ ಕನ್ನಡಿಗರು ನಪುಂಸಕರು” ಎಂದು ಭಗವಾನ್ ಹೇಳಿದ್ದೇಕೆ?

 

ಇತ್ತೀಚಿನ ಸುದ್ದಿ

Exit mobile version